Back to List

Kagga 351 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಹುದುಗಿಹುದದೆಲ್ಲಿ ಪರಮಾತ್ಮನೀ ತನುವಿನಲಿ? । ಹೃದಯದೊಳೊ ಮೆದುಳಿನೊಳೊ ಹುಬ್ಬಿನಿರುಕಿನೊಳೋ ॥ ಇದನೆನಿತೊ ತರ್ಕಿಸಿಹರ್; ಎನ್ನೆಣಿಕೆಯನು ಕೇಳು । ಉದರವಾತ್ಮನಿವಾಸ - ಮಂಕುತಿಮ್ಮ ॥ ೩೫೧ ॥

hudugi ihudu adu elli paramAtmanI tanuvinali? । hRudayadoLo meduLinoLo hubbina irukina oLO? ॥ idanu enito tarkisihar; enneNikeyanu kELu । udara AtmanivAsa - Mankutimma ॥ 351 ॥

Meaning in Kannada

ಈ ಜಗತ್ತಿನ ಸೃಷ್ಟಿಯ ಎಲ್ಲದರಲ್ಲೂ ಆ ಪರಮಾತ್ಮ ನಿವಸಿಸುತ್ತಾನೆ ಎನ್ನುವುದು ನಮ್ಮ ನಂಬಿಕೆ. ಆದರೆ ನಮ್ಮ ದೇಹದಲ್ಲಿ ಆ ಪರಮಾತ್ಮ ಎಲ್ಲಿದ್ದಾನೆ? ಹೃದಯದಲ್ಲೋ, ಬುದ್ಧಿಯಲ್ಲೋ ಅಥವಾ ಎರಡು ಹುಬ್ಬುಗಳು ಕೂಡುವ ಭ್ರುಕುಟಿಯಲ್ಲೋ ಎಂದು ನಾನಾ ತರ್ಕಗಳು ಇರುವಾಗ, ಹೊಟ್ಟೆ ತುಂಬಿದಾಗ ಆತ್ಮ ತೃಪ್ತಿಯಾಗುತ್ತದೆಯಾದ್ದರಿಂದ, ಆ ಪರಮಾತ್ಮ ಉದರದಲ್ಲಿ, ಎಂದರೆ ಹೊಟ್ಟೆಯಲ್ಲಿ ಇದ್ದಾನೆ ಎಂದು ಅರಿತುಕೋ ಎನ್ನುತ್ತಾ ಒಂದು ಪರಮಸತ್ಯವನ್ನು ನುಡಿದಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"Where has God hidden in this body? In the heart? or brain? or where the eyebrows meet? Many people have debated it before; Listen to my theory - stomach is where He lives." - Mankutimma

Themes

DevotionSocietyLove

Video Section

Video Coming Soon

Detailed video explanations by scholars and experts will be available soon.