Mankutimmana Kagga by D.V. Gundappa
ಹೇಳಲಾಗದ ಹಸಿವು, ತಾಳಾಲಾಗದ ತಪನೆ । ಆಳಾದಲಿ ನಾಚನಾಗಿಪ ಚಿಂತೆಯೂಟೆ ॥ ಗಾಳಿಯೆತ್ತತ್ತಣಿನೊ ತಂದೀವ ಸೋಂಕು - ಇವೆ । ಬಾಳ ಸಾಮಗ್ರಿಯಲ - ಮಂಕುತಿಮ್ಮ ॥ ೩೫೦ ॥
hELalAgada hasivu, tALalAgada tapane । ALadali nAchanAgipa chinteya UTe ॥ gALiyu ettattaNino tandIva sOnku । bALa sAmagriyala - Mankutimma ॥ 350 ॥
ನಮಗೆ ಈ ಜಗತ್ತಿನಲ್ಲಿ ಏನೋ ಬೇಕು,ಆದರೆ ಅದು ನಮಗೇ ಹೇಳಲಾಗುವುದಿಲ್ಲ ಮತ್ತು ಅದನ್ನು ಪಡೆಯಲು ನಾವು ತೀವ್ರವಾಗಿ ಪರದಾಡುತ್ತೇವೆ.ನಮ್ಮ ಮನಸ್ಸಿನ ಒಳಗೆ ನಾವೇ ಹೊಕ್ಕು, ನಮಗಿರುವ ಆಲೋಚನೆಗಳು ಮತ್ತು ಬುಗ್ಗೆ ಬುಗ್ಗೆಯಾಗಿ ಮೇಲೇಳುವ ಚಿಂತೆಗಳ ಮಹಾಪೂರವನ್ನು ನೋಡಿದರೆ, ನಾಚಿಕೆಯಾಗುತ್ತದೆ. ಹೊರಗಿನಿಂದ ಬಂದು ನಮ್ಮ ಮನದಲ್ಲಿ ಮನೆಮಾಡಿ ನಮ್ಮನ್ನು ಈ ಜಗತ್ತಿಗೆ ಅಂಟಿಸಿಬಿಡುವ ಇಂತಹ ಆಲೋಚನೆಗಳೇ, ನಾವು ನಡೆಸುವ ಬಾಳಿಗೆ ಸಾಮಗ್ರಿ ಎಂದು ವಾಸ್ತವಿಕ ಚಿತ್ರಣವನ್ನು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"What do we have in life? So much hunger that can not be described. Restlessness that is har to endure. Embarrassing thoughts buried deep in our minds. Desires that the wind brings along from somewhere. These are our facts of life and how can we be happy with these?" - Mankutimma
Video Coming Soon
Detailed video explanations by scholars and experts will be available soon.