Back to List

Kagga 349 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಮಿತ ನಿನ್ನ ಗುಣ ಶಕ್ತಿ, ಮಿತ ನಿನ್ನ ಕರ್ತವ್ಯ । ಮಿತ ಅತಿಗಳಂತರವ ಕಾಣುವುದೆ ಕಡಿದು ॥ ಹಿತವೆನಿಸಿದನಿತೆಸಗು; ದೈವಕುಳಿದುದನು ಬಿಡು । ಕೃತಿಯಲಿ ದೈವಕಂ - ಮಂಕುತಿಮ್ಮ ॥ ೩೪೯ ॥

mita ninna guNa shakti, mita ninna kartavya । mita atigaLantarava kANuvude kaDidu ॥ hitavenisidanitesagu; daivake uLidudanu biDu । kRutiyali daivakam - Mankutimma ॥ 349 ॥

Meaning in Kannada

ನಿನ್ನ ಶಕ್ತಿ ಮತ್ತು ನಿನ್ನ ಕ್ಷಮತೆಗೆ ಒಂದು ಮಿತಿ ಇದೆ ಮತ್ತು ಆ ಮಿತಿಯೊಳಗೆ ನಿನ್ನ ಎಲ್ಲ ಕೆಲಸ ಕಾರ್ಯಗಳೂ ಇರುತ್ತವೆ. ಆದರೆ ನಮ್ಮ ಮಿತಿಗಳನ್ನು ಮತ್ತು ನಮ್ಮ ಕಾರ್ಯಕ್ಷಮತೆಯನ್ನು ಅರಿಯುವುದು ಬಹಳ (ಕಡಿದು) ಕಷ್ಟವಾದ ಕೆಲಸ.ನಿನಗೆ ಹಿತ ಎಂದು ಅನಿಸಿದ್ದನ್ನು ನೀನು ಮಾಡು, ನಿನ್ನ ಮಿತಿಯನ್ನು ಮೀರಿದ್ದನ್ನು ಮತ್ತು ನಿನ್ನ ಕೈಲಾಗದ್ದನ್ನು ಆ ದೈವಕ್ಕೆ ಬಿಡು. ನೀ ಮಾಡುವ ಎಲ್ಲ ಕೆಲಸವನ್ನೂ ಆ ದೈವಕ್ಕೆ ಅರ್ಪಿಸಿಬಿಡು ಎಂಬ ತತ್ವವನ್ನು ಪ್ರತಿಪಾದಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"Limitted are your qualities and capabilities. So, limited are your duties as well. To recognize one's limit is hard and it very easy to confuse it with the limitless possibilities. You must put in as much effort that pleases you (your limit). Stop when it is truly hurting. Leave the rest to God. Let there be His part also in your work." - Mankutimma

Themes

DevotionDetachmentPeaceDuty

Video Section

Video Coming Soon

Detailed video explanations by scholars and experts will be available soon.