Mankutimmana Kagga by D.V. Gundappa
ಬಾಳಿನೊಳಕಿಚ್ಚು ದೆಸೆದೆಸೆಗುರಿಯ ಚಾಚುತಿರೆ । ಕಾಲನೆನ್ನುವ ಹುಚ್ಚ ಮಣ್ಣನೆರಚುತಿರೆ ॥ ಧೂಳು ಹೊಗೆಗಳ ಹೊರತು ಜಗದಿ ಬೇರಿಲ್ಲದಿರೆ । ಮೇಲೇನು? ಬೀಳೇನು? - ಮಂಕುತಿಮ್ಮ ॥ ೩೪೮ ॥
bALinoLakichchu desedeseguriya chAchutire । kAlanennuva huchcha maNNAnerachutire ॥ dhULu hogegaLa horatu jagadi bErilladire । mElEnu? bILEnu? - Mankutimma ॥ 348 ॥
ನಮ್ಮ ಮನದೊಳಗೆ ಇರುವ ದ್ವೇಷ, ಅಸೂಯೆ, ಮತ್ಸರ, ಮುಂತಾದ ದಳ್ಳುರಿಗಳು ನಾಲ್ಕೂ ದಿಕ್ಕುಗಳಿಗೆ ಸಮಯ ಸಮಯಕ್ಕೆ ಬುಗ್ಗೆಯಂತೆ ಮೇಲೇಳುತ್ತಿರುವಾಗ, ಇವೆಲ್ಲ ಕೂಡಿ ಧೂಳಂತೆ ಹರಡುತ್ತಿರುವಾಗ ಮತ್ತು ಈ ಧೂಳು ಮತ್ತು ಬೆಂಕಿಗಳಲ್ಲದೆ ಬೇರೇನೂ ಇಲ್ಲದೆ ಇರುವಾಗ ನಾವುಮೇಲಿದ್ದರೇನುಕೆಳಗಿದ್ದರೇನು ಎಂದು ಮನುಜರ ಬದುಕಿನ ಮತ್ತೊಂದು ಆಯಾಮವನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು.
"The struggles and passions in life are like flames spreading heat in ten directions. Time is like a fool who is thowing sand at it (fire) to douse it. This whole world seems to be a dance of dust and smoke from this activity. You may rise or you may fall; in this dance, everything seems to be the same." - Mankutimma
Video Coming Soon
Detailed video explanations by scholars and experts will be available soon.