Mankutimmana Kagga by D.V. Gundappa
ರುಚಿಗೊಪ್ಪೆ ರಸನೆಗದು ಶೂಲವಹುದುದರಕ್ಕೆ । ತ್ವಚೆ ಬೇಳ್ಪ ತಂಗಾಳಿಯಿಂ ಬೇನೆಯೆದೆಗೆ ॥ ರಚಿಸಿದವನಿಂತೊಡಲೊಳಿಡೆ ವಿಷಮ ಕುಟಿಲಗಳ । ಉಚಿತವಾವುದೋ ನಿನಗೆ? - ಮಂಕುತಿಮ್ಮ ॥ ೩೪೭ ॥
richigoppe rasanegedu shUlavahudu udarakke । tvache bELpa tangALiyim bEneyedege ॥ rachisidavanu intu oDaloLu iDe viShama kuTilagaLa । uchitavAvudO ninage? - Mankutimma ॥ 347 ॥
ನಾಲಿಗೆಗೆ ರುಚಿಯಾದದ್ದು,ಆರೋಗ್ಯಕ್ಕೆ ಹಿತವಾಗುವುದಿಲ್ಲ. ರುಚಿಯಾಗಿದೆ ಎಂದು ಆಸೆ ಪಟ್ಟು ತಿಂದರೆ ಹೊಟ್ಟೆನೋಯುತ್ತದೆ,ಆರೋಗ್ಯ ಕೆಡುತ್ತದೆ. ಚರ್ಮಕ್ಕೆ ಹಿತವಾಗಿರುತ್ತದೆ ಎಂದು ತಂಗಾಳಿಗೆ ಹೋದರೆ ಒಳಗೆ ಶೀತವೋ,ಉಬ್ಬಸವೋ ಬರುತ್ತದೆ. ಒಂದು ಅಂಗಕ್ಕೆ ಹಿತವಾದದ್ದು ಮತ್ತೊಂದು ಅಂಗಕ್ಕೆ ವಿಷಮವಾಗುವಂತಹ ಕುಟಿಲತೆಗಳನ್ನು ‘ಸೃಷ್ಟಿಸಿದಾತನೆ’ ನಮ್ಮ ಒಡಲಲ್ಲಿ ಇಟ್ಟಿರುವಾಗ ನಮಗೆ ಹಿತವಾವುದು ಅಹಿತವಾವುದು ಎಂದು ಅರಿಯುವುದೇ ಕಷ್ಟ ಎಂದು ನಮ್ಮ ಬದುಕಿನ ವಾಸ್ತವಿಕತೆಯ ಒಂದು ಆಯಾಮವನ್ನು ತೋರಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"God has created the body with parts that have conflicting needs. The tongue likes spicy tasty food which is bad for th tummy. The skin like cool breeze that is bad for the lungs. You have to decide which one you need to please." - Mankutimma
Video Coming Soon
Detailed video explanations by scholars and experts will be available soon.