Back to List

Kagga 345 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಅಡಿಜಾರಿ ಬೀಳುವುದು, ತಡವಿಕೊಂಡೇಳುವುದು । ಕಡುಬ ನುಂಗುವುದು, ಕಹಿಮದ್ದ ಕುಡಿಯುವುದು ॥ ದುಡುಕಿ ಮತಿದಪ್ಪುವುದು, ತಪ್ಪನೊಪ್ಪೆನ್ನುವುದು । ಬದುಕೆಂಬುದಿದು ತಾನೆ? - ಮಂಕುತಿಮ್ಮ ॥ ೩೪೫ ॥

aDijAri bILuvudu, taDavikonDELuvudu । kaDuba nonguvudu, kahimaddu kuDiyuvudu ॥ diDuki mati tappuvudu, tappanu oppennuvudu । badukembudu idu tAne? - Mankutimma ॥ 345 ॥

Meaning in Kannada

ಇಡುವ ಹೆಜ್ಜೆ ಜಾರಿ ಕೆಳಗೆ ಬೀಳುವುದು,ಮತ್ತೆ ಸಾವರಿಸಿಕೊಂಡು ಮೇಲೆ ಏಳುವುದು, ಸಿಹಿ ಕಡುಬ ತಿನ್ನುವುದು, ತಿಂದದ್ದು ಹೆಚ್ಚಾಗಿ ಹೊಟ್ಟೆ ನೊಂದರೆ, ಕಹಿಯಾದ ಔಷಧಿಯನ್ನು ಕುಡಿಯುವುದು, ದುಡುಕಿ ಏನೋ ತಪ್ಪ ಮಾಡುವುದು, ಮಾಡಿದ ತಪ್ಪನ್ನು ‘ನಾ ಮಾಡಿದ್ದೇ ಸರಿ’ಎಂದು ಸಾಧಿಸುವುದು, ಹೀಗೆ ಸಾಗುವುದೇ ನಮ್ಮ ಜೀವನವೆಂದು, ಬದುಕಿನಲ್ಲಿನ ವಾಸ್ತವಿಕತೆಯ ಒಂದು ಚಿತ್ರವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"To slip and fall; only to shake up and get up to continue. To eat lot of kadubu (sweet) in hurry; only to be forced to take bitter medicine later. Making wring decisions due to haste; not accepting them as wrong as pursuing them as if they were the right ones. Life is just this. Isn't it?" - Mankutimma

Themes

LifeMorality

Video Section

Video Coming Soon

Detailed video explanations by scholars and experts will be available soon.