Mankutimmana Kagga by D.V. Gundappa
ಮಿಡಿಚೀಪೆಕಾಯಿಗಳ ತಡಬಡದೆ ನುಂಗುವುದು । ಕಡಿಯೆ ಹೊಟ್ಟೆಯಲಿ ಹರಳೆಣ್ಣೇ ಕುಡಿಯುವುದು ॥ ಬಿಡುತಿರಲು ನೋವಾಗ ಸುಖವೀಗಳೆನ್ನುವುದು । ಪೊಡವಿಗಿದೆ ಭೋಗವಿಧಿ - ಮಂಕುತಿಮ್ಮ ॥ ೩೪೪ ॥
miDichIpekAyigaLa taDabiDade nuMguvudu । kaDiye hoTTeyali haraLeNNE kuDiyuvudu ॥ biDutiralu nOvAga sukhavu IgaL ennuvudu । poDavigide bhOgavidhi - Mankutimma ॥ 344 ॥
ಇನ್ನೂ ಮಾಗದ ಸಣ್ಣ ಸಣ್ಣ ಹಸೀ ಸೀಬೇಕಾಯಿಗಳನ್ನು ಆಸೆಯಿಂದ ಕಡಿದು, ಸಂಪೂರ್ಣ ಜಗಿಯದೆ ಆತುರಾತುರವಾಗಿ ನುಂಗಿ, ಹೊಟ್ಟೆನೋವು ಬರಿಸಿಕೊಂಡು, ಆ ನೋವ ನಿವಾರಣೆಗೆ, ಹರಳೆಣ್ಣೆ ಕುಡಿದು, ಆ ನೋವು ಕಡಿಮೆಯಾಗುವಾಗ, ಆಹಾ! ಇದೇ ಸುಖ ಎನ್ನುವಂತೆ ಇದೆ, ಮನುಷ್ಯರು ಈ ಜಗತ್ತಿನಲ್ಲಿ ಸುಖಗಳನ್ನು ಅನುಭವಿಸುವ ರೀತಿ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"To eat guavas without waiting for them to ripe. To drink castor oil when stomach hurts (due to the guavas). When the pain subsides, calling that as pleasure. This is the way we have fun in this world." - Mankutimma [Translator's note: We were perfectly normal and happy. But, due to our restlessness, we do things that disturb happiness. Then we search the entire world for a cure. When little of the disturbed happiness is back, we feel satisfied. The whole cycle would have been unnecessary if we coutroled our restlessness to bgen with.]
Video Coming Soon
Detailed video explanations by scholars and experts will be available soon.