Mankutimmana Kagga by D.V. Gundappa
ಓರ್ವ ನಾನೆಂದು ನೀನೆಂತು ತಿಳಿಯುವೆ ಜಗದಿ? । ನೂರ್ವರಣಗಿಹರು ನಿನ್ನಾತ್ಮ ಕೋಶದಲಿ ॥ ಪೂರ್ವಿಕರು, ಜತೆಯವರು, ಬಂಧುಸಖಶತ್ರುಗಳು । ಸರ್ವರಿಂ ನಿನ್ನ ಗುಣ - ಮಂಕುತಿಮ್ಮ ॥ ೩೩೮ ॥
Orva nAnendu nInentu tiLiyuve jagadi? । nUrvaraNagiharu ninnAtma kOshadali ॥ pUrvikaru, jateyavaru, bandhusakhashatrugaLu । sarvarim ninna guNa - Mankutimma ॥ 338 ॥
‘ನಾನು’ ಒಬ್ಬನೇ, ಒಬ್ಬಂಟಿ ‘ನನ್ನಿಂದಲೇ ನಾನು’ ಎಂದು ನೀ ತಿಳಿಯಬೇಡ. ನಿನ್ನ ಭಾವಗಳಲ್ಲಿ, ಯೋಚನೆಗಳಲ್ಲಿ, ಗುಣಗಳಲ್ಲಿ ಮತ್ತು ನಿನ್ನ ಅಂತರಾತ್ಮದಲ್ಲಿ ನಿನ್ನ ಪೂರ್ವಜರ, ಸ್ನೇಹಿತರ, ಬಂಧುಗಳ, ಸನ್ನಿಹಿತರ ಮತ್ತು ನಿನ್ನ ಶತ್ರುಗಳ, ಹೀಗೆ ಎಲ್ಲರ ಪ್ರಭಾವ ಆಗಿದೆ. ನಿನ್ನ ಗುಣಮತ್ತು ಸ್ವಭಾವವು ನೀ ಸಂಪರ್ಕಕ್ಕೆ ಬಂದ ಎಲ್ಲರಿಂದ ಆಗಿದೆ, ಎಂದು ಒಬ್ಬ ವ್ಯಕ್ತಿಯ ರೂಪುಗೊಳ್ಳುವಿಕೆಯನ್ನು ವಿಶಧೀಕರಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Individuality is a myth. How can you think about yourself as a single person? There are traces of hundred (many) people in this shell that you call as "me". Your ancestors, family, relatives, friends and enemies are all part of what you are. Your qualities are derived (influenced) by all of them." - Mankutimma
Video Coming Soon
Detailed video explanations by scholars and experts will be available soon.