Mankutimmana Kagga by D.V. Gundappa
ನಿನ್ನಜ್ಜ ಮುತ್ತಜ್ಜ ಮೂಲಜ್ಜರೆಲ್ಲರುಂ । ನಿನ್ನೊಳವತರಿಸಿ ಮುಂದಿನ್ನು ಜನಿಸಲಿಹ ॥ ನಿನ್ನ ಮಗ ಮರಿಮೊಮ್ಮರೊಳು ಜೀವಿಪ್ಪರ್ । ಅನ್ವಯ ಚಿರಂಜೀವಿ - ಮಂಕುತಿಮ್ಮ ॥ ೩೩೯ ॥
ninnajja muttajja mUlajjaru ellarum । ninnoLu avatarisi mundinnu janisalu iha ॥ ninna maga mari mommara oLu jIvippar । anvaya chiranjIvi - Mankutimma ॥ 339 ॥
ವಂಶವಾಹಿನಿಯ ಸಿದ್ಧಾಂತದ ಪ್ರಕಾರ ನಮ್ಮ ತಂದೆ, ಅಜ್ಜ, ಮುತ್ತಜ್ಜ, ತಾಯಿ, ಅಜ್ಜಿ, ಮುತ್ತಜ್ಜಿ, ಹೀಗೆ ಹಿಂದಿನ ಏಳು ತಲೆಮಾರಿನ ಎಲ್ಲ ಜನರ ಸ್ವಭಾವ ಮತ್ತು ರೂಪಗಳು ನಮ್ಮೊಳಗೆ ಅವತರಿಸಿರಬಹುದು ಮತ್ತು ಮತ್ತು ಅವರುಗಳು ನಮ್ಮನ್ನೂ ಸೇರಿಸಿಕೊಂಡು ನಮ್ಮ ಮಗ, ಮೊಮ್ಮಗ , ಮರಿಮಗ ಹೀಗೆ ಮುಂದಿನ ಏಳು ತಲೆಮಾರುಗಳಿಗೆ ಸ್ವಭಾವ ಮತ್ತು ರೂಪಗಳನ್ನು ರವಾನಿಸುತ್ತಾ, ಚಿರಂಜೀವಿಯಂತೆ ಈ ಜಗತ್ತಿನಲ್ಲಿ ಜೀವಿಸುತ್ತಾರೆ ಎಂದು ಜಗತ್ತಿನ ನಿರಂತರತೆಯ ಸ್ವರೂಪವನ್ನು ವಿವರಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Your grandfather, his father and the fist person in your lineage all of them are inside you. They will also be in your son who is yet to be born, and his grand son too. The live inside you in the form of the influence each generation has on its next and that will go on for ever." - Mankutimma [Traslator's note: Is he talking about genes?]
Video Coming Soon
Detailed video explanations by scholars and experts will be available soon.