Mankutimmana Kagga by D.V. Gundappa
ಅನಿಲಗುಣ ಭೂಗುಣಗಳಿಂ ಸಸ್ಯಧಾನ್ಯಗುಣ । ತನುಗುಣಗಳನ್ನದಿಂ, ಮನದ ಗುಣ ತನುವಿಂ ॥ ಜನಪದವಿಧಂಗಳಿಂತಾಗಿಹುವು ಸೃಷ್ಟಿಯನೆ । ಮನುವೊಬ್ಬ, ಜನತೆ ಶತ - ಮಂಕುತಿಮ್ಮ ॥ ೩೩೭ ॥
anilaguNa bhUguNagaLim sasyadhanyaguNa । tanuguNagaLannadim, manada guNa tanuvim ॥ janapada vidhangaLu intAgihuvu sRuShTiyane । manuvobba, janate shata - Mankutimma ॥ 337 ॥
ಬೀಸುವ ಗಾಳಿ ಮತ್ತು ಅದರೊಳಗಿನ ಅನಿಲಗಳ ಗುಣಗಳು ಮತ್ತು ಅಲ್ಲಿನ ಭೂಮಿಯ ಗುಣಕ್ಕೆ ಅನುಗುಣವಾಗಿ,ಆ ಪ್ರದೇಶದಲ್ಲಿ ಬೆಳೆಯುವ ಬೆಳೆಗಳ ಗುಣ, ತಿನ್ನವ ಅನ್ನದ ಗುಣದಿಂದ ದೇಹದ ಗುಣ, ದೇಹದ ಗುಣದಂತೆ ಮನದ ಗುಣ, ಹೀಗೆ ಬೇರೆ ಬೇರೆ ಪ್ರದೇಶದಲ್ಲಿ ಬೇರೆ ಬೇರೆ ರೀತಿಯ ಜನಪದ. ಎಲ್ಲರೂ ಮನುಷ್ಯರೇ ಆದರೂ ಜನಾಂಗಗಳು ನೂರಾರಾಗಿ ರೂಪುಗೊಂಡಿವೆ ಈ ಜಗತ್ತಿನಲ್ಲಿ, ಎಂಬುದೇ ಶ್ರೀ ಗುಂಡಪ್ಪನವರ ಈ ಮುಕ್ತಕದ ಹೂರಣ.
"Air and earth are the basic qualities that get into the plants and cereals. Our body follows the qualities of what we eat. Mind follows the body. This leads to varieties in population. All are same at a human level, but differ at a group level due to their habits." - Mankutimma
Video Coming Soon
Detailed video explanations by scholars and experts will be available soon.