Mankutimmana Kagga by D.V. Gundappa
ನಿನ್ನ ಜೀವಿತವೆಲ್ಲ ನಿನ್ನ ಕೈಮಾಳ್ಕೆಯೇಂ? । ಅನ್ಯಶಕ್ತಿಗಳೆನಿತೊ ಬೆರೆತಿರುವುವಲ್ಲಿ ॥ ಅನ್ನವಿಡುವರು, ತಿಳಿವನೀವರ್, ಒಡನಾಡುವರು । ನಿನ್ನ ಬಾಳ್ಗಿವರಿರರೆ? - ಮಂಕುತಿಮ್ಮ ॥ ೩೩೬ ॥
ninna jIvitavella ninna kaimALkeyEM? । anyashaktigaLu enito beretiruvuvu alli ॥ annaviDuvaru, tiLivanIvar, oDanADuvaru । ninna bALge ivaru irare? - Mankutimma ॥ 336 ॥
ನಿನ್ನ ಬೆಳವಣಿಗೆಗೆ ಅನ್ಯರ ಶಕ್ತಿಗಳೆಷ್ಟೋ ಪೂರಕವಾಗಿ ಬೆರೆತಿರುವಾಗ ನಿನ್ನ ಬದುಕು ಕೇವಲ ನಿನ್ನಿಂದಲೇ ರೂಪುಗೊಂಡದ್ದೇನು? ನಿನಗೆ ಅನ್ನವಿಟ್ಟವರು, ಅರಿವನಿತ್ತವರು ಮತ್ತು ನಿನ್ನ ಒಡನಾಡಿಗಳು, ಈ ಎಲ್ಲರೂ ಒತ್ತಾಸೆಯಿಂದ ನಿನ್ನ ಬಾಳಲ್ಲಿ ಇರುವಾಗ, " ನಾನು ಸ್ವತಂತ್ರನಾಗಿ ಬೆಳೆದಿದ್ದೇನೆ" ಎಂದು ನೀ ತಿಳಿಯಬಾರದು ಎಂದು, ಒಬ್ಬ ವ್ಯಕ್ತಿಯ ಬಾಳ ವಿಕಸನದ ಪರಿಯನ್ನು ವಿಶ್ಲೇಷಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Do you think your whole life is self made? There are so many forces that have got together to shape your present. People who have given you food, others who have advised you, some others who just gave you company - have these people not been a part of your making?" - Mankutimma
Video Coming Soon
Detailed video explanations by scholars and experts will be available soon.