Mankutimmana Kagga by D.V. Gundappa
ಆವ ಜನ್ಮದ ಋಣವೊ, ಆವ ಕರ್ಮದ ಕಣವೊ । ಮಾವಾಗಿ ಬೇವಾಗಿ ಸಂಸಾರ ವನದಿ ॥ ಜೀವಕೀಂಟಿಪುವು ಮಾದಕದ ರಸಪಾನಗಳ । ಭಾವಜ್ವರಂಗಳವು - ಮಂಕುತಿಮ್ಮ ॥ ೩೩೫ ॥
Ava janmada RuNavo, Ava karmada kaNavo । mAvAgi bEvAgi samsAra vanadi ॥ jIvake eenTipuvu mAdakada rasapAnagaLA । bhAva jvarangaLavu - Mankutimma ॥ 335 ॥
ಹಲವಾರು ಪೂರ್ವ ಜನ್ಮಗಳ ವಾಸನೆಗಳಿಗೆ ಅನುಸಾರವಾಗಿ ನಮಗೆ ಈ ಜನ್ಮ. ( ಇದನ್ನು ನಂಬದವರೂ ಇದ್ದಾರೆ). ಹಿಂದಿನಿಂದ ಹೊತ್ತು ತಂದ ಆ ವಾಸನೆ ಮತ್ತು ಕರ್ಮಗಳನ್ನು ಪೂರೈಸಿಕೊಳ್ಳಲು ಈ ಜನ್ಮ ಮತ್ತು ಇಲ್ಲಿನ ಕರ್ಮ. ಇಲ್ಲಿ ಮಾವಿನ ಸಿಹಿಯನ್ನೂ ಸವಿಯಬೇಕು. ಬೇವಿನ ಕಹಿಯನ್ನೂ ಸವಿಯಬೇಕು. ಇವೆರಡರ ಸಮ್ಮಿಶ್ರ ‘ರಸಪಾನ’ವನ್ನು ನಮಗೆ ವಿಧಿ ಮಾಡಿಸುತ್ತಿದೆ. ನಮ್ಮ ಭಾವೋದ್ವೇಗಗಳೇ ನಮಗೆ ತಾಪವನ್ನು ಹೆಚ್ಚಿಸುತ್ತಾ "ಭಾವ ಜ್ವರ’ವನ್ನು ಉಂಟುಮಾಡುತ್ತದೆ ಎಂದು, ಬದುಕಿನಲ್ಲಿ ನಮಗೆ ದೊರೆಯುವ ಸಿಹಿ-ಕಹಿಗಳ ಸಮ್ಮಿಶ್ರ ಅನುಭವಗಳನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Left over karmic debt from some older birth, consequences of previous actions come back to haunt us. They come as mango or neem (sweet or bitter) in the forest of this world. Providence makes a strong potion of those fruits and make people drink it and induce a fever of emotions." - Mankutimma
Video Coming Soon
Detailed video explanations by scholars and experts will be available soon.