Mankutimmana Kagga by D.V. Gundappa
ಓರೋರ್ವನಿಚ್ಛೆಗುಣವೊಂದೊಂದು ಬಗೆ ಜಗದಿ । ಭಾರಮೋರೊರ್ವನಿಂಗೊಂದೊಂದು ತೆರದಿ ॥ ದಾರಗಳಿನವರ ವಿಧಿ ಪಿಡಿದು ಕುಣಿದಾಡಿಸಲು । ನೂರುಜಡೆಕೋಲಾಟ - ಮಂಕುತಿಮ್ಮ ॥ ೩೩೪ ॥
OrOrvana icChe guNavu ondondu bage jagadi । bhAramu Ororvaninge ondondu teradi ॥ dAragaLina avara vidhi piDidu kuNidADisalu । nUru jaDe kOlATa - Mankutimma ॥ 334 ॥
ಜಗತ್ತಿನಲ್ಲಿ ಒಬ್ಬೊಬ್ಬನ ಇಚ್ಚೆಯ ಗುಣ ಒಂದೊಂದು ರೀತಿ ಮತ್ತು ಅವನವನ ಕಾರ್ಯದ ಭಾರ ಒಬ್ಬೊಬ್ಬನಿಗೆ ಒಂದೊಂದು ರೀತಿ . ಎಲ್ಲರ ಸೂತ್ರಗಳನ್ನೂ ವಿಧಿಯು ಹಿಡಿದು ಕುಣಿದಾಡಿಸಲು,ಈ ಜಗತ್ತೇ ಒಂದು" ನೂರು ಜಡೆ ಕೋಲಾಟ" ವಾಡುವಂತಹ ಚಿತ್ರಣವನ್ನು ಬಿಂಬಿಸುತ್ತದೆ ಎಂಬುದೆ ಈ ಮುಕ್ತಕದ ಹೂರಣ.
"Each one has his own desires and his own qualities. Each one has to deal with his own burdens in his own way. Providence is playing a careful game of Kolu Jade of hundred strings by controlling all of us." - Mankutimma [Translator' note: The game involves tying one end of all the strings very high up. Each one will hold one end and dance to choreographed steps so that the strings can be twisted and untwisted without making a knot.]
Video Coming Soon
Detailed video explanations by scholars and experts will be available soon.