Mankutimmana Kagga by D.V. Gundappa
ಸತ್ಯಾನುಭವವೆಲ್ಲರಿಂಗಮೊಂದೆಂತಹುದು? । ಬೆಟ್ಟದಡಿಯೊಳಗೊಬ್ಬ; ಕೋಡಬಳಿಯೊಬ್ಬ ॥ ಎತ್ತರದ ದೃಶ್ಯ ಕಣಿವೆಯೊಳಿಹನಿಗಾದೀತೆ? । ನೇತ್ರದಂದದೆ ನೋಟ - ಮಂಕುತಿಮ್ಮ ॥ ೩೩೩ ॥
satyAnubhavavu ellaringam ondentahudu? । beTTadaDiyoLagobba; kODabaLiyobba ॥ ettarada dRushya kaNiveyoLihanigAdIte? । nEtradandade nOTa - Mankutimma ॥ 333 ॥
ಸತ್ಯದ, ಎಂದರೆ ಪರಮಾತ್ಮನ ಅನುಭವ ಎಲ್ಲರಿಗೂ ಒಂದೇ ರೀತಿಯಲ್ಲಿ ಆಗುವುದು ಹೇಗೆ ಸಾಧ್ಯ? ಬೆಟ್ಟದಡಿ ಒಬ್ಬ ನಿಂತರೆ ಅವನಿಗೆ ಬೆಟ್ಟದ ಬುಡ ಮಾತ್ರ ಕಾಣುತ್ತದೆ. ಬೆಟ್ಟದ ತುತ್ತ ತುದಿಯಲ್ಲಿ ನಿಂತವನಿಗೆ ತುದಿ ಮಾತ್ರ ಕಾಣುತ್ತದೆ. ಕಣಿವೆಯಲ್ಲಿ ನಿಂತವಗೆ ಎತ್ತರದ ದೃಶ್ಯ ಕಾಣುತ್ತದೆಯೇ? ನಮಗೆ ನೋಡಲು ಕ್ಷಮತೆ ಎಷ್ಟಿದೆಯೋ ಅಷ್ಟು ಮಾತ್ರ ನೋಟ ಸಿಗುತ್ತದೆ. ಹೀಗೆ ಈ ಜಗತ್ತನ್ನು ನೋಡುವ ಮತ್ತು ಆ ಸೃಷ್ಟಿಕರ್ತನನ್ನು ಮತ್ತು ಅವನ ಸೃಷ್ಟಿಯನ್ನು ನೋಡುವ ಮತ್ತು ಅರ್ಥಮಾಡಿಕೊಳ್ಳುವ ವಿಷಯವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"The realization of the truth can not happen to every one in the same way. Can it? One may realize it in the valley looking up towards the enormous mountain. Another person may have it on top of the mountain. Can a person in the valley see the same thing as the one on the top? What we see depends on our point of view." - Mankutimma
Video Coming Soon
Detailed video explanations by scholars and experts will be available soon.