Mankutimmana Kagga by D.V. Gundappa
ಸತ್ಯವೆಂಬುದದೆಲ್ಲಿ? ನಿನ್ನಂತರಂಗದೊಳೊ । ಸುತ್ತ ನೀನನುಭವಿಪ ಬಾಹ್ಯ ಚಿತ್ರದೊಳೋ ॥ ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ । ತತ್ತ್ವದರ್ಶನವಹುದು - ಮಂಕುತಿಮ್ಮ ॥೩೩೨ ॥
satya embudu adu elli? ninna antarangada oLo । sutta nInu anubhavipa bAhya chitradoLO ॥ yuktiyinda ondanu ondake toDisi sarinODe । tattvadarshana ahudu - Mankutimma ॥ 332 ॥
ಸತ್ಯವೆಂಬುದು ಎಲ್ಲಿದೆ? ನಿನ್ನ ಅಂತರಂಗದಲ್ಲೋ ಅಥವಾ ನೀ ಇದ್ದು ಅನುಭವಿಸುತ್ತಿರುವ ಈ ಬಾಹ್ಯ ಪ್ರಪಂಚದಲ್ಲೋ? ಯುಕ್ತಿಯಿಂದ ಒಂದನು ಒಂದಕ್ಕೆ ಸರಿಹೊಂದಿಸಿ ನೋಡಿದರೆ ನಮಗೆ ತತ್ವದರ್ಶನವಾಗುವುದು ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Where is the truth hidden? In your own conscience. In the world surrounding you that you can experience. When you connect them both with your intellect, then you will have the realization of the ultimate truth. " - Mankutimma
Video Coming Soon
Detailed video explanations by scholars and experts will be available soon.