Back to List

Kagga 329 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ನಿಲದೆ ನಡೆವುದು ಮೊದಲು ಕೊನೆಯಿಲ್ಲದೀಯಾಟ । ಕಳೆವುವದರಲಿ ನಮ್ಮ ಜನುಮಜನುಮಗಳು ॥ ಗೆಲವಾರ್ಗೊ! ಸೋಲಾರ್ಗೊ! ಲೆಕ್ಕನೋಡುವುದೆಂದೊ! । ಫಲವು ಬರಿಯಾಟವೆಲೊ - ಮಂಕುತಿಮ್ಮ ॥ ೩೨೯ ॥

nilade naDevudu modalu kone illada ee ATa । kaLevuvu adarali namma janumajanumagaLu ॥ gelavArgo! sOlArgo! lekanODuvudu endo! । phalavu bari ATavelo - Mankutimma ॥ 329॥

Meaning in Kannada

ನಿರಂತರವಾಗಿ ನಡೆಯುವುದು ಜನ್ಮ ಜನ್ಮಾಂತರದ ನಮ್ಮ ಬದುಕಿನ ಆಟ. ಈ ಆಟದಲ್ಲಿ ಗೆದ್ದವರು ಯಾರೋ, ಸೋತವರು ಯಾರೋ ಎಂದು ಲೆಕ್ಕವನ್ನು ನೋಡುವುದು ಯಾವ ಕಾಲಕ್ಕೋ ಎಂದು ಯಾರಿಗೂ ಅರಿವಿಲ್ಲ. ಆದ್ದರಿಂದ ನಮ್ಮ ಬದುಕಿಗೆ ಫಲವೆಂದರೆ, ಬರೀ ಬಾಳಿನಾಟ ಅಡುವುದಷ್ಟೇ ಅಲ್ಲದೆ ಬೇರೇನೂ ಅಲ್ಲ ಎಂದು ಬದುಕಿನ ಲೆಕ್ಕಾಚಾರಗಳ ಮತ್ತು ಫಲಾಫಲಗಳ ವಿಚಾರವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"Like this, the game of cards go on for ever without beginning or an end. We spend our lives after lives in this game (being cards). Who is winning, who is losing - we will never know. When will the scorecards be tallied? The game itself is the result." - Mankutimma

Themes

DeathMoralitySelf

Video Section

Video Coming Soon

Detailed video explanations by scholars and experts will be available soon.