Back to List

Kagga 328 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಎಲೆಕಟ್ಟನಾಗಾಗ ಕಲಸಿಕೊಡುವುದೆ ಸೃಷ್ಟಿ । ಬಳಿಕೆಲೆಯ ಗತಿಯೆಂತೋ ಎಲ್ಲಿ ಸೇರುವುದೋ! ॥ ಬಳಸುತಿಹುದೊಂದೊಂದುಮೊಂದೊಂದು ದಿಕ್ಕಿನಲಿ । ಅಲೆಯುವೆವು ನಾವಂತು - ಮಂಕುತಿಮ್ಮ ॥ ೩೨೮ ॥

elekaTTanu AgAga kalasikoDuvude sRuShTi । baLika eleya gatiyentO elli sEruvudO! ॥ baLasuta ihudu ondondu ondondu dikkinali । aleyuvevu nAvi antu - Mankutimma ॥ 328 ॥

Meaning in Kannada

ಜಗತ್ತಿನಲ್ಲಿ ಜನರ ಬದುಕಿನ ಪರಿಯನ್ನು ವಿವರಿಸುವ ಈ ಇಸ್ಪೀಟಾಟದ ಉದಾಹರಣೆಯನ್ನು, ಮಾನ್ಯ ಗುಂಡಪ್ಪನವರು ಹಿಂದಿನ ಕಗ್ಗಗಳಲ್ಲೂ ಉಲ್ಲೇಖಮಾಡಿದ್ದಾರೆ. ಇಸ್ಪೀಟಿನ ಆಟದಲ್ಲಿ ಎಲೆಗಳನ್ನು ಕಲೆಸಿದನಂತರ ಯಾವ ಎಲೆ ಯಾವ ದಿಕ್ಕಿನಲ್ಲಿ ಹೋಗುವುದೋ ಗೊತ್ತಿಲ್ಲದಂತೆ ಹಂಚಿ ನಾನಾ ದಿಕ್ಕುಗಳಿಗೆ ಎಸೆಯಲ್ಪಟ್ಟು ಎಲ್ಲಿ ಸೇರುವುದೋ ಎಂಬಂತೆ, ವಿಧಿಯಾಟದಿಂದ ಕಲಸಲ್ಪಟ್ಟು, ಹಂಚಲ್ಪಟ್ಟು ನಾನಾ ದಿಕ್ಕುಗಳಿಗೆ ಎಸೆಯಲ್ಪಟ್ಟು ದಿಕ್ಕಾಪಾಲಾಗಿ ಅಲೆಯುವುದೇ ನಮ್ಮ ಬದುಕೂ ಸಹ ಎಂದು ಬದುಕಿನ ಒಂದು ಸತ್ಯವನ್ನು ನಮ್ಮ ಮುಂದಿಟ್ಟಿದ್ದಾರೆ ಶ್ರೀ ಗುಂಡಪ್ಪನವರು.

Meaning & Interpretation

"Creation is like a pack of cards. We are the cards. The game involves mixing them and drawing them at random. No one cannot know which card will be dealt when and where. Any card can be used for anything at any time. We are wandering in this world thus." - Mankutimma

Themes

LifeNature

Video Section

Video Coming Soon

Detailed video explanations by scholars and experts will be available soon.