Mankutimmana Kagga by D.V. Gundappa
ಜೀವಸಂಘವಿದೇನು? ಗಂಜೀಫಿನೆಲೆಗಟ್ಟು । ದೈವ ಪೌರುಷ ಪೂರ್ವವಾಸನೆಗಳೆಂಬಾ ॥ ಮೂವರದನಾಡುವರು, ಚದುರಿಸುತೆ, ಬೆರಸಿಡುತೆ । ನಾವೆಲ್ಲರಾಟದೆಲೆ - ಮಂಕುತಿಮ್ಮ ॥ ೩೨೭ ॥
jIvasanGhavu idu Enu? ganjIphina ele kaTTu । daiva pauruSha pUrvavAsanegaLu emba A ॥ mUvaru adanu ADuvaru, cadurisute, beraDisute । nAvellarATadele - Mankutimma ॥ 327 ॥
ಮಾನವನ ಬದುಕನ್ನು ವಿಶ್ಲೇಷಣೆ ಮಾಡುತ್ತಾ, ಜೀವಿಗಳ ಬದುಕು ಗಂಜೀಫಾ ಎಲೆಗಳ ಆಟದಂತೆ ಇದೆ. ಇದನ್ನು ಆಡುವವರು ದೈವ, ನಮ್ಮ ಪೂರ್ವಕರ್ಮ ಮತ್ತು ನಮ್ಮ ಪ್ರಯತ್ನ. ನಾವೆಲ್ಲಾ ಈ ಗಂಜೀಫಿನ ಎಲೆಗಳಂತೆ. ನಮ್ಮನ್ನು ಈ ಮೂವರು ಆಟಗಾರರು ಬೆರೆಸುತ್ತ, ಚದುರಿಸುತ್ತಾ, ಮತ್ತೆ ಬೆರೆಸುತ್ತ ಆಡುತ್ತಾರೆ,ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ‘ಬದುಕಿಗಾರ್ ನಾಯಕರು’ ಎಂದು ೭ ನೇ ಕಗ್ಗದಲ್ಲಿ ಕೇಳುವಂತೆ.
"What is this living world? It is like a board game. Providence, human effort and previous deed (their consequences) are the players. The game involves disbursing the pawns, arraging them again and mixing them. We are just the pawns." - Mankutimma
Video Coming Soon
Detailed video explanations by scholars and experts will be available soon.