Back to List

Kagga 326 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸುಮ್ಮನಿರಲೊಲದೆ ತನಗೊಡನಾಡಿಯೊರ್ವಳನು । ನಿರ್ಮಿಸಿ ನಿಜಾಂಶದಿಂ ಮಾಯೆಯೆಂಬವಳಿಂ ॥ ದುಣ್ಮಿದ ಜಗಜ್ಜಾಲಗಳಲ್ಲಿ ವಿಹರಿಸುತಿರುವ । ಬೊಮ್ಮನಾಟವ ಮೆರೆಸೊ - ಮಂಕುತಿಮ್ಮ ॥ ೩೨೬ ॥

summane iralu olade tanage oDanAgi OrvaLanu । nirmisi nija aMshadiM mAye ambavaLinda ॥ uNmida jagajjAlagaLalli viharisutiruva । bommanATava mereso - Mankutimma ॥ 326 ॥

Meaning in Kannada

ತಾನೊಬ್ಬನೇ ಇರಲಾಗದೆಂದು ತನಗೆ ಒಡನಾಡಿ ಬೇಕೆಂದು " ಮಾಯೆ"ಯೆಂಬ ಒಡನಾಡಿಯನ್ನು ಸೃಷ್ಟಿಸಿ, ಅವಳ ಮೂಲಕ ಈ ಜಗಜ್ಜಾಲವನ್ನು ನಿರ್ಮಿಸಿ ಆ ಜಗಜ್ಜಾಲದಲ್ಲಿ ತಾನು ವಿಹರಿಸುತ್ತ ನಡೆಸುತ್ತಿರುವ ಈ ಜಗತ್ತಿನ ನಾಟಕವನ್ನು " ಮೆರೆಸೋ’ ಚೆನ್ನಾಗಿ ಅನುಭವಿಸಿ, ಅಭಿಮಾನಿಸಿ, ಅಭಿವೃದ್ಧಿಪಡಿಸೋ ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"The creator did not want to be alone. So, he created a companion for himself from himself - Maya (the illusion). Now he lets Maya create the world of illusion and wanders all around it. Our life is in that illusion. Let us lead it in way it befits him." - Mankutimma

Themes

LifeSelf

Video Section

Video Coming Soon

Detailed video explanations by scholars and experts will be available soon.