Back to List

Kagga 325 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಎಷ್ಟು ಬಗೆ ಯಂತ್ರಗಳೊಳೆಷ್ಟು ರಸಮಿಶ್ರದಿಂ । ದೆಷ್ಟಾಧಿಭೂತಗಳು ಪರಿಪಾಕವೊಂದಿ ॥ ಒಟ್ಟು ಸೇರಿಹವು ನರನೆಂಬ ಸಿದ್ಧಿಯೊಳವನು । ಸೃಷ್ಟಿಶೈಲದ ಶಿಖರ - ಮಂಕುತಿಮ್ಮ ॥ ೩೨೫ ॥

eShTu bage yantragaLa oLu eShTu rasamishradinda । eShTu adhibhUtagaLu paripAkavondi ॥ oTTu sErihavu naranu emba siddhiya oLuavanu । sRuShTishailada shiKara - Mankutimma ॥ 325 ॥

Meaning in Kannada

ಜಗತ್ತಿನಲ್ಲಿ ಪ್ರಾಣಿಗಳ ಸೃಷ್ಟಿಯ ಕ್ರಮವೊಂದನ್ನು ವಿಶ್ಲೇಷಣೆ ಮಾಡುತ್ತಾ, ಪ್ರಾಣಿಗಳ ದೇಹವು ಪಂಚಭೂತಗಳಿಂದಾದ ಯಂತ್ರಗಳಸಮೂಹ. ಈ ದೇಹ ಉತ್ಪತ್ತಿಯಾಗುವುದು, ಬೆಳೆಯುವುದು ಮತ್ತು ಬದುಕುವುದುಎಲ್ಲ ಈ ಯಂತ್ರಗಳು ಒಸರುವ ರಸಗಳಮಿಶ್ರಣದಿಂದ. ಹೀಗೆ ಆ ಪರಮಾತ್ಮನ ಸೃಷ್ಟಿಯಲ್ಲಿ ‘ನರ’ ನೆಂಬ ಪ್ರಾಣಿ, ಪ್ರಾಣಿ ಸಂಕುಲದಲ್ಲಿ ಅತ್ಯುತ್ತಮವಾದವನು. ಸೃಷ್ಟಿಯನ್ನು ಒಂದು ‘ಬೆಟ್ಟವೆಂದುಕೊಂಡರೆ’ ಮಾನವ ಅದರ ತುತ್ತ ತುದಿಯಲ್ಲಿ ಇದ್ದಾನೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

Meaning & Interpretation

"This human body is made of so many different kind of machines and so many emotions. Man's body is the final result of tiresome refining of the base material. He is the crown jewel of creation" - Mankutimma

Themes

DeathNatureLove

Video Section

Video Coming Soon

Detailed video explanations by scholars and experts will be available soon.