Mankutimmana Kagga by D.V. Gundappa
ಏನೆ ನಿಜವಿರಲಿ ಮತ್ತೇನೆ ಸುಳ್ಳಾಗಿರಲಿ । ನಾನೆನಿಪ್ಪಾತ್ಮವೊಂದಿರುವುದನುಭವಿಕ ॥ ಹಾನಿಗಾವಾತನಾತ್ಮವನುಮಂ ಕೆಡಹದಿರು । ಧ್ಯಾನಿಸಾತ್ಮದ ಗತಿಯ - ಮಂಕುತಿಮ್ಮ ॥ ೩೨೪ ॥
Ene nijavirali mattEne suLLAgirali । nAnu enipa Atma ondu iruvudu anubhavika ॥ hanige AvAtana Atmavanum keDahade iru । dhyAnisu Atmada gatiya - Mankutimma ॥324 ॥
ಯಾವುದೇ ನಿಜವಾಗಿರಲಿ ಅಥವಾ ಸುಳ್ಳಾಗಿರಲಿ, ‘ನಾನು’ ಎಂದು ಎನಿಸುವ ಆತ್ಮದ ಅನುಭವವಿರುವ ತನಕ ‘ಅನ್ಯ’ ಆತ್ಮಗಳಿಗೆ ಹಾನಿಯನ್ನುಂಟು ಮಾಡದೆ, ನಿನ್ನ ಆತ್ಮದ ಗತಿಯ ಮತ್ತು ಗಮ್ಯದ ಬಗ್ಗೆ ನೀನು ಧ್ಯಾನಿಸು, ಎಂದರೆ ಅದರ ಬಗ್ಗೆ ಆಲೋಚಿಸು ಎಂದು ಅದೇಶಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"What and where is the nature of soul? There may be many theories; some true, some false. But every one has a conscience that every one feels and understands. Don't do any thing that brings harm to that conscience. Meditate and listen to (and follow) it. " - Mankutimma
Video Coming Soon
Detailed video explanations by scholars and experts will be available soon.