Mankutimmana Kagga by D.V. Gundappa
ಸಾರಸುಖನಿಧಿ ಪರಬ್ರಹ್ಮನಿರುತಿರಲ್ । ಸ್ವಾರಸ್ಯಹೀನರೆನ್ನುವರೆ ಜೀವಿತವೆ? ॥ ಪೌರುಷ ಪ್ರೇಮ ಸೌಂದರ್ಯಗಳುಮಂತೆಯೇ । ಸ್ವಾರಸ್ಯವೋ ರಹಸ್ಯ - ಮಂಕುತಿಮ್ಮ ॥ ೩೨೩ ॥
sAra suKhanidhi parabrahmanu iruta iralu । svArasyahIna ennnuvare jIvitave? ॥ pauruSha prEma saundaryagaLum anteyE । svArasyavO rahasya - Mankutimma ॥ 323 ॥
ಸುಖರಸದ ಸಾರದ ನಿಧಿಯಂತೆ ಪರಬ್ರಹ್ಮನು ಇರುತಿರುವಾಗ ಜೀವನವನ್ನು ಸ್ವಾರಸ್ಯಹೀನವೆನ್ನಲಾದೀತೇ. ಪೌರುಷ, ಪ್ರೇಮ ಮತ್ತು ಸೌಂದರ್ಯಗಳೂ ಸಹ ಅಂತೆಯೇ. ಈ ಜಗತ್ತಿನ ಎಲ್ಲ ಸ್ವಾರಸ್ಯವೂ ರಹಸ್ಯವಾಗೇ ಇದೆ ಎಂದು ಸೃಷ್ಟಿಯ ಒಂದು ರೂಪವನ್ನು ಈ ಮುಕ್ತಕದಲ್ಲಿ ಪ್ರಸ್ತಾಪಮಾಡಿದ್ದಾರೆ, ಮಾನ್ಯ ಗುಂಡಪ್ಪನವರು.
"The Creator is the treasure of all essence and happiness. That being so, how can we say that his creation and life is not fascinating. Fascination is also a mystery just like what drives mankind towards courage, love and beauty." - Mankutimma
Video Coming Soon
Detailed video explanations by scholars and experts will be available soon.