Back to List

Kagga 322 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಆ ವಿಶ್ವರೂಪ ಸಂದರ್ಶನದಿ ಹೊಂದಿಹುವು । ಜೀವ ನಿರ್ಜೀವಗಳು, ಕ್ರಮ ಯದೃಚ್ಛೆಗಳು ॥ ಆವಶ್ಯ ವಶ್ಯ; ಸ್ವಾಚ್ಛಂದ್ಯ ನಿರ್ಭಂದಗಳು । ಕೈವಲ್ಯದೃಷ್ಟಿಯದು - ಮಂಕುತಿಮ್ಮ ॥ ೩೨೨ ॥

A vishvarUpa sandarshanadi hondihuvu । jIva nirjIvagaLu, krama yadRucChegaLu ॥ Avashya vashya, svAcChandya nirbhandagaLu । kaivalya dRushTiyadu - Mankutimma ॥ 322 ॥

Meaning in Kannada

ಈ ವಿಶ್ವದ ರೂಪದಲ್ಲಿ ಜೀವವಿರುವುದು ಮತ್ತು ಜೀವವಿಲ್ಲದವು, ಕ್ರಮಬದ್ಧವಾಗಿರುವುದು, ಕ್ರಮಕ್ಕೊಳಪಡದೆ ಸ್ವತಂತ್ರವಾಗಿರುವುದು, ನಮ್ಮ ವಶದಲ್ಲಿರುವುದು, ನಮ್ಮ ವಶದಲ್ಲಿ ಇರದೇ ಇರುವುದು, ಸ್ವಚ್ಚಂದವಾಗಿ ನಡೆಯುವುದು, ನಿರ್ಬಂಧಕ್ಕೊಳಪಟ್ಟವು ಎಲ್ಲವೂ ಇವೆ. ಇವುಗಳನ್ನು ಹೇಗೆ ಇವೆಯೋ ಹಾಗೆಯೇ ನೋಡಿದರೆ ಅದು ನಿರ್ಮಲ ಅಥವಾ ಸ್ವಚ್ಚ ದೃಷ್ಟಿ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"In this vision of the universe, all opposites are together (and not differnt from each other)- living things and objects, planned and the spontaneous, required as well as dispensable, free as well as constrained. Such is the glory of the unified view." - Mankutimma

Themes

LifeNature

Video Section

Video Coming Soon

Detailed video explanations by scholars and experts will be available soon.