Back to List

Kagga 321 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಜೀವನದ ಪರಿಪೂರ್ಣದರ್ಶನವದೊಂದಿಹುದು । ಭೂವ್ಯೋಮ ವಿಸ್ತರದ ಮಿತಿಯ ಮೀರ್ದುದುದು ॥ ದೇವ ನರ ಪಶು ಸಸಿಗಳೆಲ್ಲ ಕುಣಿಯುವರಲ್ಲಿ । ಭಾವಿಸಾ ಚಿತ್ರವನು - ಮಂಕುತಿಮ್ಮ ॥ ೩೨೧ ॥

jIvanada paripUrNadarshana adu ondu ihudu । bhUvyOma vistarada mitiya mIrdudu adu ॥ dEva nara pashu sasigaLella kuNiyuvaralli । bhAvisA chitravanu - Mankutimma ॥ 321 ॥

Meaning in Kannada

ಜೀವನಕ್ಕೆ ಪರಿಪೂರ್ಣವಾದ ಒಂದು ದರ್ಶನವಿದೆ ಅಥವಾ ಇಡೀ ಬದುಕಿಗೆ ಒಂದು ಪೂರ್ಣವಾದ ಚಿತ್ರವಿದೆ. ಅದು ಭೂಮಿ ಆಕಾಶದ ವಿಸ್ತಾರವನ್ನು ಮೀರಿ ಇದೆ. ಅಲ್ಲಿ ದೇವತೆಗಳು, ನರರು, ಪಶುಗಳು ಗಿಡ ಮರಗಳು ಎಲ್ಲವೂ ನಲಿದಾಡುತ್ತಾರೆ.ಅಂತಹ ಚಿತ್ರವನ್ನು ಭಾವಿಸು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"There is one complete vision of Life. This vision is beyond the boundaries of expanse earth and the sky. In that vision, the Gods, humans, animals, plants are all dancing. Imagine such a picture." - Mankutimma [Translator's note: In that perfect vision, there is no difference between them - Gods, humans, animals and plants. Infact, there is nothing separating them from the other inanimate objects also.]

Themes

DevotionLifeNature

Video Section

Video Coming Soon

Detailed video explanations by scholars and experts will be available soon.