Mankutimmana Kagga by D.V. Gundappa
ಪಂಚಕವೊ, ಪಂಚ ಪಂಚಕವೊ; ಮಾಭೂತಗಳ । ಹಂಚಿಕೆಯನರಿತೇನು? ಗುಣವ ತಿಳಿದೇನು? ॥ ಕೊಂಚ ಕೊಂಚಗಳರಿವು ಪೂರ್ಣದರಿವಾದೀತೆ? । ಮಿಂಚಿದುದು ಪರತತ್ತ್ವ - ಮಂಕುತಿಮ್ಮ ॥ ೩೨೦ ॥
panchakavo, pancha panchakavo; mAbhUtagaLa । hanchikeyanu aritEnu? guNava tiLidEnu? ॥ koncha konchagaLa arivu pUrNada arivAdIte? । minchidudu paratattva - Mankutimma ॥ 320 ॥
ಪಂಚಭೂತಗಳೆಂಬ ಈ ಮಹಾ ಭೂತಗಳು ಐದೋ,ಇಪ್ಪತ್ತೈದೋ,ಅದರ ಲೆಕ್ಕವನ್ನು ಅರಿತು ಏನು ಪ್ರಯೋಜನ? ಅವುಗಳ ಗುಣಗಳನ್ನು ನಾವು ತಿಳಿದುಕೊಂಡು ಏನಾಗಬೇಕಿದೆ? ಅದರ ಸಮಗ್ರ ಅಥವಾ ಸಂಪೂರ್ಣ ಅರಿವು ನಮಗಾಗುವುದಿಲ್ಲ. ಅಲ್ಪಸ್ವಲ್ಪ ಅದನ್ನು ತಿಳಿದುಕೊಂಡರೆ, ಪೂರ್ಣದ ಅರಿವು ನಮಗೆ ಆಗುತ್ತದೆಯೇ?. ಈ ಪರಮಾತ್ಮನ ಮತ್ತು ಅವನ ಸೃಷ್ಟಿಯ ಜ್ಞಾನ,ನಮ್ಮ ಅರಿತುಕೊಳ್ಳುವ ಕ್ಷಮತೆಗೆ ಮಿಂಚಿದ್ದು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"Principle of five, or five times five. What do we got to do with relations among the basic elements? What do we gain by understanding them? Can the incomplete knowledge about parts lead to the realization of the whole? The cosmic spirit is like a lightning that is difficult to grasp." - Mankutimma
Video Coming Soon
Detailed video explanations by scholars and experts will be available soon.