Back to List

Kagga 319 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಪಂಚಭೂತಗಳಂತೆ; ಪಂಚೇಂದ್ರಿಯಗಳಂತೆ । ಪಂಚವೇಕೆ? ಚತುಷ್ಯ ಷಟ್ಯವೇಕಲ್ಲ? ॥ ಹೊಂಚುತಿಹನಂತೆ ವಿಭು; ಸಂಚವನದೇನಿಹುದೊ । ವಂಚಿತರು ನಾವೆಲ್ಲ - ಮಂಕುತಿಮ್ಮ ॥ ೩೧೯ ॥

panchabhUtagaLante; pancEndriyagaLante । panchavEke? catuShya shaTyavEkalla? ॥ honchutihanante vibhu; sanchu avanadu Enihudo । vanchitaru nAvella - Mankutimma ॥ 319 ॥

Meaning in Kannada

ಈ ಜಗತ್ತನ್ನು ನಡೆಸುವುದು ಪಂಚಭೂತಗಳಂತೆ ಮತ್ತು ನಮಗೆ ಪಂಚೇಂದ್ರಿಯಗಳಿವೆಯಂತೆ. ಐದೇ ಏಕೆ, ನಾಲ್ಕು ಅಥವಾ ಆರು ಏಕಿರಬಾರದು?. ಪರಮಾತ್ಮ ಈ ಜಗತ್ತನ್ನು ಯಾರಿಗೂ ಅರ್ಥವಾಗದ ರೀತಿಯಲ್ಲಿ ಸೃಜಿಸಿದ್ದಾನೆ, ಇದರಲ್ಲಿ ಅವನ ಸಂಚು ಏನಿರಬಹುದು. ನಮಗೆ ಇದೆಲ್ಲ ಅರಿಯದಂತೆ ಈ ಜಗತ್ತನ್ನಿಟ್ಟು ನಮ್ಮನ್ನೆಲ್ಲ ವಂಚಿಸಿದ್ದಾನೋ ಆ ಪರಮಾತ್ಮ ಎಂದು, ಇನ್ನೂ ಸಂದೇಹವಾಗಿಯೇ ಉಳಿದಿರುವ ವಿಷಯವನ್ನು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು, ಈ ಕಗ್ಗದಲ್ಲಿ.

Meaning & Interpretation

"Five basic elements; Five sense organs. Why are they always five? Why not four? Or Six? The creator is hatching some plan. We do not know what his plan is. We are the people who are being duped (keeping a secret from us)." - Mankutimma

Themes

Society

Video Section

Video Coming Soon

Detailed video explanations by scholars and experts will be available soon.