Mankutimmana Kagga by D.V. Gundappa
ಆಟಕ್ಕೆ ಫಲವೇನು? ಕುತುಕದ ರುಚಿಯೆ ಫಲ । ಚೀಟಿ ತಾಂ ಬೀಳೆನೆನಲ್ ಆಟ ಸಾಗುವುದೆ? ॥ ಏಟಾಯ್ತೆ ಗೆಲವಾಯ್ತೆಯೆಂದು ಕೇಳುವುದೇನು? । ಆಟದೋಟವೆ ಲಾಭ - ಮಂಕುತಿಮ್ಮ ॥ ೩೩೦ ॥
ATakke phalavnu? kautukada ruchiye phala । chITi tAM bILenu enal ATa sAguvude? ॥ ETAyte gelavAyte endu kELuvudu Enu? । ATada Otave lAbha - Mankutimma ॥ 330 ॥
ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ಮತ್ತೆ ಇಸ್ಪೀಟಿನ ಆಟದ ಉದಾಹರಣೆಯನ್ನು ನೀಡಿ, ನಮ್ಮ ಬಾಳಿನ ಆಟವೂ ಅದೇ ರೀತಿ ಎಂದು ಹೇಳುತ್ತಾರೆ. ಇಸ್ಪೀಟಿನ ಆಟದಲ್ಲಿ ಸರಿಯಾದ ಎಲೆ ಬಿದ್ದರೆ ಆಟ ಮುಂದುವರೆಯುವುದು. ಹಾಗಾಗಿ, ಇಲ್ಲಿ ಗೆದ್ದೆವೋ, ಸೋತೆವೋ ಎಂದು ಕೇಳುವುದದೇನು,ಆಟವಾಡಿದ್ದಷ್ಟೇ ಲಾಭವಲ್ಲವೇ? ಹಾಗೆಯೇ ‘ಜೀವನದಾಟದಲ್ಲಿ ಏಟಾಯ್ತೆ ಗೆಲುವಾಯ್ತೆಂದೆಂದು ಕೇಳುವುದದೇನು’ ಎಂದು ಹೇಳುತ್ತಾ, ಇಲ್ಲಿ ಬದುಕಿದ್ದೆ ಲಾಭವೆಂದು ಹೇಳುತ್ತಾರೆ ಶ್ರೀ ಗುಂಡಪ್ಪನವರು.
"What is the outcome of the game? The curiosity generated during the game itself is the result. The game does not progress if the cards are not cut (dropped). Once played, no one should care if the card won or got trumped. The progress of the game itself should be considered as profit." - Mankutimma
Video Coming Soon
Detailed video explanations by scholars and experts will be available soon.