Back to List

Kagga 314 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಕರ್ಮಋಣಶೇಷಂಗಳುಳಿಯದಿರೆ ಬಿತ್ತಾಗಿ । ಜನ್ಮ ಜನ್ಮಾಂತರದ ಮರಗಳೇಳದಿರೆ ॥ ಬ್ರಹ್ಮನುದ್ಯಾನವನ ಶಾಶ್ವತದೊಳಿಹುದೆಂತು ?‌ । ಮರ್ಮವಿದು ಸೃಷ್ಟಿಯಲಿ - ಮಂಕುತಿಮ್ಮ ॥ ೩೧೪ ॥

karma RuNashEShangaL uLiyade ire bittAgi । janma janmAntarada maragaL ELade ire ॥ brahmana udyAnavana shAshvatadoL ihudu entu ? । marmavidu sRuShTiyali - Mankutimma ॥ 314 ॥

Meaning in Kannada

ಜನ್ಮದಿಂದ ಜನ್ಮಕ್ಕೆ ನಮ್ಮ ಕರ್ಮ ಶೇಷವು ಬೀಜವಾಗಿ ಬರದೆ ಇದ್ದರೆ ಜನ್ಮ ಜನ್ಮಾಂತರದ ಮರ ಹೇಗೆ ಬೆಳೆಯುತ್ತದೆ. ಹಾಗಾದರೆ ಮಾತ್ರ ಈ ಜಗತ್ತು ಆ ಪರಮಾತ್ಮನ ಲೀಲಾವಿನೋದಕ್ಕೆ ಒಂದು ಸುಂದರ ಉದ್ಯಾನವನವಾಗಲು ಸಾಧ್ಯ. ಇದೇ ಜಗತ್ತಿನ ಸೃಷ್ಟಿ ರಹಸ್ಯ ಎಂದು ಈ ಜಗತ್ತಿನ ಸೃಷ್ಟಿಯ ಮತ್ತು ನಿರಂತರತೆಯ ವಿಷಯವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"The left over debt of consequences of actions from previous births are the seeds sown in the garden of the Creator. New trees of repeated births grow from that. It is because of this carrying over, does this garden stay green for ever. The reason for this setup is a great mystery in this creation." - Mankutimma

Themes

LifeNature

Video Section

Video Coming Soon

Detailed video explanations by scholars and experts will be available soon.