Back to List

Kagga 313 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಒಳ್ಳೆ ಲೆಕ್ಕಿಗನಲ್ಲ ಪರಮೇಷ್ಠಿ; ನಮ್ಮಿಂದ । ಸಲ್ಲುವುದ ಕೊಳಲು ಜನ್ಮಾಂತರಕೆ ಕಾಯ್ವಂ ॥ ಇಲ್ಲಿ ಸಲ್ಲುವುದ ತಾನಿಂದೆ ತೀರಿಸಿಕೊಳ್ಳ- । ಲೊಲ್ಲನೇನಂತಕನು - ಮಂಕುತಿಮ್ಮ ॥ ೩೧೩ ॥

oLLe lekkigan alla paramEShThi; namminda । salluvuda koLalu janmAntarake kAyvaM ॥ illi salluvuda tAninde tIrisikoLlal । ollan En antakanu - Mankutimma ॥ 313 ॥

Meaning in Kannada

ಆ ಪರಬ್ರಹ್ಮ ಒಳ್ಳೆಯ ಲೆಕ್ಕಾಚಾರದವನಲ್ಲ. ನಾವು ನಮ್ಮ ಕರ್ಮವನ್ನೆಲ್ಲ ಜನ್ಮ ಜನ್ಮಾಂತರಕ್ಕೆ ಕೊಂಡು ಹೋಗಲು ಇಷ್ಟಪಡದೆ ಇಂದೇ ಅವನಿಗೊಪ್ಪಿಸಿ ಲೆಕ್ಕಾಚಾರವನ್ನೆಲ್ಲ ಇಂದೇ ತೀರಿಸಿ ಹೋಗಬೇಕೆಂದುಕೊಂಡರೆ, ಅವನಿಗದು ಇಷ್ಟವಿಲ್ಲ(ಒಲ್ಲ) ಏಕೆ? ಎಂದು ಒಂದು ತಾತ್ವಿಕವಾದ ಪ್ರಶ್ನೆಯನ್ನು ಕೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ. ಜೀವನದಲ್ಲಿ ಬಹಳ ಕಷ್ಟಪಟ್ಟು ನೊಂದು ಬೆಂದ ಜನರು " ಸಾಕಪ್ಪಾ ಈ ಜನ್ಮ, ಮುಕ್ತಿ ಸಿಕ್ಕರೆ ಸಾಕು’ ಎಂದು ಬೇಡುವ ದನಿಯಂತೆ ಇದೆ ಈ ಕಗ್ಗ.

Meaning & Interpretation

"The Creator does not seem to be a smart accountant. He waits for many lifetimes to extract from us what we owe him. Why has he not put a practice in place to settle the account of this birth in this life only?" - Mankutimma

Themes

Life

Video Section

Video Coming Soon

Detailed video explanations by scholars and experts will be available soon.