Back to List

Kagga 312 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಒಂದು ಜನ್ಮದ ಲೆಕ್ಕವಂದೆ ಮುಗಿವಂತೇಕೆ । ಸಂಧಿಸವು ಕಾಲ ಕಾರಣ ಕರಣ ಕಾರ್ಯ ? ॥ ಮುಂದಕೇತಕೆ ಮಿಗಿಸಿ ಕರ್ಮಋಣಶೇಷಗಳ । ಬಂಧಿಪನು ವಿಧಿ ನಿನ್ನ ? - ಮಂಕುತಿಮ್ಮ ॥ ೩೧೨ ॥

ondu janmada lekkavu ande mugivante Eke । sandhisavu kAla kAraNa karaNa kArya ? ॥ mundakEtake migisi karma RuNa shEShagaLa । bandhipanu vidhi ninna ? - Mankutimma ॥ 312 ॥

Meaning in Kannada

‘ಈ ಜನ್ಮದಲ್ಲಿನ ನಮ್ಮ ಕೆಲಸ ಮತ್ತು ಅದರ ಫಲಗಳ ಲೆಕ್ಕಾಚಾರ ಈ ಜನ್ಮದಲ್ಲೇ ಏಕೆ ಮುಗಿಯುವುದಿಲ್ಲ? ನಮ್ಮ ಕೆಲಸ, ಅದರ ಸಮಯ, ಅದಕ್ಕೆ ಬೇಕಾದ ಸಾಧನ ಮತ್ತು ಅದರ ಕಾರಣಗಳನ್ನು ಏತಕ್ಕೆ ಉಳಿಸಬೇಕು. ಬಹುಶಃ ಇವುಗಳನ್ನು ಉಳಿಸಿ ನಿನ್ನನ್ನು ಇನ್ನೊಂದು ಜನ್ಮಕ್ಕೆ ಬಂದಿಸುತ್ತಾನೋ ವಿಧಿ’ ಎಂದು ಜನ್ಮ ಜನ್ಮಾಂತರದ ಕೊಂಡಿಯ ವಿಷಯವನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"Why doesn't the account of causation (time, cause and action) be tallied to zero balance at the end of each life? Why does it get carried over to subsequent births and haunt us then. Providence ties us down with pervious balance for ever." - Mankutimma

Themes

LifeDeath

Video Section

Video Coming Soon

Detailed video explanations by scholars and experts will be available soon.