Mankutimmana Kagga by D.V. Gundappa
ಒಟ್ಟಿನಲಿ ತತ್ತ್ವವಿದು: ವಿಕಟರಸಿಕನೋ ಧಾತ । ತೊಟ್ಟಿಲನು ತೂಗುವನು, ಮಗುವ ಜಿಗುಟುವನು ॥ ಸಿಟ್ಟನ್ ಒಡವುಟ್ಟುಗಳೊಳಾಗಿಪನು, ಸೋಲಿಪನು । ತುತ್ತು ವಿಕಟಿಗೆ ನಾವು- ಮಂಕುತಿಮ್ಮ ॥ ೩೧೧ ॥
oTTinali tattvavidu: vikaTarasikanO dhAta । toTTilanu tUguvanu, maguva jiguTuvanu ॥ siTTan oDavuTTugaLoL Agipanu, sOlipanu । tuttu vikaTige nAvu - Mankutimma ॥ 311 ॥
ಈ ಜಗತ್ತಿನ ತತ್ವವಿಷ್ಟೇ. ನಮ್ಮನ್ನು ಹಾಸ್ಯದಂತೆ ಕಾಣುವ ಹಿಂಸೆಯಿಂದ ನಡೆಸಿಕೊಳ್ಳುತ್ತಿದ್ದಾನೆ, ನಮ್ಮ ಸೃಷ್ಟಿಕರ್ತ. ಒಂದು ಕಡೆ ಮಗುವಿನ ತೊಟ್ಟಿಲನ್ನುತೂಗಿ ಮತ್ತೆ ಮಗುವನ್ನು ಜಿಗುಟಿ ವಿಕಟ ಅಟ್ಟಹಾಸವನ್ನು ಮೆರೆಯುವಂತೆ, ನಮ್ಮ ಒಡಹುಟ್ಟಿದವರಲ್ಲಿ, ಪ್ರೀತಿಯಿರಬೇಕಾದ್ದಲ್ಲಿ, ಸಿಟ್ಟನ್ನು ಕೊಟ್ಟು, ಜಯದ ಮತ್ತು ಆನಂದದ ದಾರಿಯನ್ನು ತೋರಿಸಿ ಕಷ್ಟಗಳ ಸಂಕೋಲೆಯಲ್ಲಿ ನಮ್ಮನ್ನು ಸಿಕ್ಕಿಸಿ, ನಾವು ಸಂಕಟ ಪಡುವಾಗ ತಾನು ಆನಂದಪಡುತ್ತಾನೆ. ನಾವು ಗೆಲುವಿನ ಸಂಭ್ರಮದಲ್ಲಿರುವಾಗ ನಮ್ಮನ್ನು ಸೋಲಿಸುತ್ತಾನೆ. ಏನಾದರೇನು ನಾವೆಲ್ಲಾ ಅವನ ವಿಕಟಹಾಸ್ಯಕ್ಕೆ ತುತ್ತಾಗಿದ್ದೇವೆ,ಎಂದು ವಿಧಿ ವಿಲಾಸದ ಸ್ವರೂಪವನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"The bottomline is this. The creator is a very tasteful person. But he has his idiasynchrasies. He rocks the cradle and also pinches the child. He makes us siblings and puts lot of love between us. But he also makes us angry at each other. He makes us lose whenever we are at fight with him. For him, we are just food for fun." - Mankutimma
Video Coming Soon
Detailed video explanations by scholars and experts will be available soon.