Mankutimmana Kagga by D.V. Gundappa
ಸಂಬಳದ ಹಂಬಲವೊ, ಡಾಂಭಿಕತೆಯಬ್ಬರವೊ । ಇಂಬು ಕೂರ್ಮೆಯ ಕರೆಯೊ, ಕರುಳ ಕರೆಕರೆಯೋ ॥ ತುಂಬಿಹುವು ಬಾಳಿನಲಿ ನೂರು ತಕರಾರುಗಳು । ಬೆಂಬಲವವೆಲೊ ಜಗಕೆ - ಮಂಕುತಿಮ್ಮ ॥ ೩೧೫ ॥
sambaLada hambalavo, DAmbhikateya abbaravo । imbu kUrmeya kareyo, karuLa karekareyO ॥ tumbihuvu bALinali nUru takarArugaLu । bembalavu avu elo jagake - Mankutimma ॥ 315 ॥
ವರಮಾನದ ಆಸೆ, ನಮ್ಮಲ್ಲಿರುವ ಸಂಪತ್ತನ್ನು ತೋರ್ಪಡಿಸಿಕೊಳ್ಳುವ ಹಂಬಲ, ಪ್ರೀತಿಸಿ ಒತ್ತಾಸೆ ಕೊಡುವ ಪ್ರಯತ್ನ, ನಾವು ಹೆತ್ತ ಮಕ್ಕಳಿನ ಮೇಲಿನ ಮಮತೆ, ಮೋಹ ಮತ್ತು ಅದರೊಟ್ಟಿಗೆ ಬರುವ ಸಾವಿರ ಸಾವಿರ ತಲೆನೋವುಗಳು,ಹೀಗೆ ಮಾನವರ ನೂರಾರು ತಕರಾರುಗಳೇ ಪೂರಕವಾಗಿ ಮತ್ತು ಅದರ ಬೆಂಬಲದಿಂದಲೇ ಈ ಜಗತ್ವ್ಯಾಪಾರ ನಡೆಯುತ್ತಿದೆ ಎಂದು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"Our life is filled with hundreds of annoyances - want of better salary, urge to be famous and successful, attachement towards home, call of a wife (spouse), crying of a child and so on. The whole world is running because of these drivers." - Mankutimma
Video Coming Soon
Detailed video explanations by scholars and experts will be available soon.