Mankutimmana Kagga by D.V. Gundappa
ಸರಕಾರ ಹರಿಗೋಲು, ತೆರೆಸುಳಿಗಳತ್ತಿತ್ತ । ಸುರೆ ಕುಡಿದವರು ಕೆಲರು ಹುಟ್ಟು ಹಾಕುವರು ॥ ಬಿರುಗಾಳಿ ಬೀಸುವುದು, ಜನವೆದ್ದು ಕುಣಿಯುವುದು । ಉರುಳದಿಹುದಚ್ಚರಿಯೊ!- ಮಂಕುತಿಮ್ಮ ॥ ೩೦೮ ॥
sarakAra harigOlu, teresuLigaLu atta itta । sure kudidavaru kelaru huTTu hAkuvaru ॥ birugALi bIsuvudu, janaveddu kuNiyuvudu । uruLade ihudu achchariyo! - Mankutimma ॥ 308 ॥
ನಮ್ಮ ಸರಕಾರ ಒಂದು ಹರಿಗೋಲಿದ್ದಂತೆ. ಆಡಳಿತದ ಸಾಗರದಲ್ಲಿ ಈ ಸರಕಾರದ ಹರಿಗೋಲು, ತೆರೆಗಳ ಮತ್ತು ಸುಳಿಗಳ ತುಯ್ದಾಟದ ನಡುವೆ ಸಾಗುತ್ತಿದೆ. ಇದರ ಚುಕ್ಕಾಣಿ ಹಿಡಿದು ಹುಟ್ಟು ಹಾಕುವವರು ಹೆಂಡ ಕುಡಿದವರಂತೆ ಅಧಿಕಾರದಿಂದ ಉನ್ಮತ್ತರಾಗಿ ನಡೆದುಕೊಳ್ಳುತ್ತಿದ್ದಾರೆ. ವಿರೋದಪಕ್ಷದವರು ಕಾಲೆಳೆಯಲು ಪ್ರಯತ್ನಿಸಿದರೂ, ಜನರಿಗೆ ಏನಾಗುವುದೋ ಎಂದು ಕಳವಳದಿಂದ ಇದ್ದರೂ, ಈ ಸರಕಾರವೆಂಬ ದೋಣಿ ಉರುಳಿ ಮುಳುಗಿ ಹೋಗದೆ ಇರುವುದೇ ಆಶ್ಚರ್ಯ ಎಂದು ನಮ್ಮ ಸರಕಾರ, ವಿರೋಧಪಕ್ಷಗಳು ಮತ್ತು ಆಡಳಿತ ವ್ಯವಸ್ಥೆಯನ್ನು ವಿಮರ್ಶೆಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ .
"Government is like a coracle. There are whirls and strong currents on either side. Drunkards are in charge of the oars. There is a strong wind. There are people who are dancing (like revolting). It is surprising that it has not capsized." - Mankutimma
Video Coming Soon
Detailed video explanations by scholars and experts will be available soon.