Mankutimmana Kagga by D.V. Gundappa
ವನ್ಯಮೃಗಗಳ ನಡುವೆ ಗೋವು ಬಂದೇನಹುದು? । ಪಣ್ಯವೀಧಿಯಲಿ ತಾತ್ತ್ವಿಕನಿಗೇನಹುದು? ॥ ಅನ್ಯಾಯದುನ್ಮತ್ತ ಕೋಲಾಹಲದ ಲೋಕ । ಪುಣ್ಯವನು ಚಿಂತಿಪುದೆ ? - ಮಂಕುತಿಮ್ಮ ॥ ೩೦೯ ॥
vanyamRugagaLA naDuve gOvu bandu Enu ahudu ? । paNyavIdhiyali tAttvikanige Enu ahudu? ॥ anyAyada unmatta kOlAhalada lOka । puNyavanu chintipude ? - Mankutimma ॥ 309 ॥
ಕಾಡುಪ್ರಾಣಿಗಳ ನಡುವೆ ಹಸು ಬಂದರೆ ಏನಾಗುತ್ತದೆ? ಅವುಗಳೆಲ್ಲ ಅದನ್ನು ಕೊಂದು ತಿನ್ನುತ್ತವೆ. ವ್ಯಾಪಾರ ನಡೆಯುವ ಬೀದಿಯಲ್ಲಿ ಯಾವನೋ ಒಬ್ಬ ತತ್ವಜ್ಞಾನಿ ತತ್ವವನ್ನು ಹೇಳಿದರೆ, ಕೇಳುವವರಾರು? ಹಾಗೆಯೇ ಅನ್ಯಾಯ, ಮದ ಅಹಂಕಾರ, ಸ್ವಾರ್ಥ ತುಂಬಿದ ಈ ಲೋಕದಲ್ಲಿ ಪುಣ್ಯಕೆಲಸದ ಬಗ್ಗೆ ಯಾರು ಚಿಂತಿಸುತ್ತಾರೆ ಎಂದು ಲೋಕದ ವಾಸ್ತವಿಕತೆಯನ್ನು ಬಿಂಬಿಸುವ ವಿಚಾರವನ್ನು ಈ ಕಗ್ಗದಲ್ಲಿ ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು.
"What will happen if a cow comes into an area with wild animals? What is the use of a philosopher in a street full of businessmen? Will the chaotic world intoxicated by injustice think about right or wrong?" - Mankutimma
Video Coming Soon
Detailed video explanations by scholars and experts will be available soon.