Mankutimmana Kagga by D.V. Gundappa
ಸುರಪಸಭೆಯಲಿ ಗಾಧಿಸುತ ವಸಿಷ್ಟ ಸ್ಪರ್ಧೆ । ಧರೆಯೊಳದರಿಂ ಹರಿಶ್ಚಂದ್ರಂಗೆ ತಪನೆ ॥ ಬರುವುದಿಂತೆತ್ತಣಿನೊ ಬೇಡದ ಪ್ರಾರಬ್ಧ । ಕರುಮಗತಿ ಕೃತ್ರಿಮವೊ - ಮಂಕುತಿಮ್ಮ ॥ ೩೦೭ ॥
surapasabheyali gAdhisuta vasiShTa spardhe । dhara oLu adariM harishchandrange tapane ॥ baruvudu intu ettaNino bEDada prArabdha । karumagati kRutrimavo - Mankutimma ॥ 307 ॥
ಒಂದುಬಾರಿ ಇಂದ್ರನ ಒಡ್ಡೋಲಗದಲ್ಲಿ ದೇವರ್ಷಿ ವಸಿಷ್ಠನಿಗೂ ವಿಶ್ಮಾಮಿತ್ರನಿಗೂ ‘ಸತ್ಯವನ್ನೇ’ ನುಡಿಯುವ ವ್ಯಕ್ತಿಗಳ ಬಗ್ಗೆ ವಾದ ವಿವಾದವಾಯಿತಂತೆ. ಅದರ ಫಲವೇ ಭೂಮಿಯಮೇಲಿದ್ದ ಹರಿಶ್ಚಂದ್ರನ ಜೀವನದಲ್ಲಿ ಉಂಟಾದ ತಾಪತ್ರಯಗಳು ಮತ್ತು ಏರುಪೇರುಗಳು. ಹೀಗೆ ಪ್ರಾರಬ್ಧಕರ್ಮ ನಮ್ಮನ್ನು ಹೇಗೆ ಯಾವಾಗ ಯಾವ ರೀತಿಯಲ್ಲಿ ಕಾಡುತ್ತದೆ ಎಂದು ಹೇಳುವುದು ಅಸಾಧ್ಯವೆಂದು ಜೀವನದ ನಗ್ನ ಸತ್ಯವನ್ನು ವಿವರಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"In the court of Indra, Vishwamitra and Vasishta had an argument. The result of that was all the hardships that Harishchandra had to face. The troubles we face could also come to us from nowhere. We have to just endure them as they come." - Mankutimma [Translator’s note: http://en.wikipedia.org/wiki/Harishchandra ]
Video Coming Soon
Detailed video explanations by scholars and experts will be available soon.