Back to List

Kagga 304 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಗಿರಿಯ ಮೇಲಕೆ ದೊಡ್ದ ಬಂಡೆಯನು ಸಿಸಿಫಸನು । ಉರುಳಿಸಿರಲೊಂದೆರಡು ಮಾರು ಘಾಸಿಯಲಿ ॥ ಸರಿದು ಕೆಳಕದದೆಂತೊ ಜಾರುವುದು ಮರಮರಳಿ । ಪುರುಷಪ್ರಗತಿಯಂತು - ಮಂಕುತಿಮ್ಮ ॥ ೩೦೪ ॥

giriya mElake doDDa baNDeyanu sisiphasanu । uruLisi iralu ondu eraDu mAru ghAsiyali ॥ saridu keLake adu ento jAruvudu maramaraLi । puruShapragatiyantu - Mankutimma ॥ 304 ॥

Meaning in Kannada

ಸಿಸಿಫಸನು ಸಾವನ್ನು ನಾಲ್ಕು ಬಾರಿ ದಾರಿ ತಪ್ಪಿಸಿಕೊಂಡದ್ದರಿಂದ ಮೃತ್ಯುದೇವನು ಅವನಿಗೆ, ದೊಡ್ಡದೊಂದು ಬಂಡೆಯನ್ನು ಬೆನ್ನಮೇಲೆ ಹೊತ್ತುಕೊಂಡು ಹೋಗಿ ಅದನ್ನು ಬೆಟ್ಟದ ಮೇಲಿರಿಸಿ ಬರಬೇಕೆಂದು ಶಿಕ್ಷೆ ವಿಧಿಸಿದನಂತೆ. ಆದರೆ ಅವನು ಪ್ರತೀ ಬಾರಿ ಅದನ್ನು ಹೊತ್ತುಕೊಂಡು ಹೋಗಿ ಅಲ್ಲಿಡುವುದರಲ್ಲೇ, ಯಾವುದೋ ಕಾರಣಕ್ಕೆ ಅದು ಉರುಳಿ ಹೋಗುತ್ತಿತ್ತಂತೆ. ನಮ್ಮ ಪ್ರಗತಿಯೂ ಹಾಗೇ ಇದೆ ಎಂದು ಮನುಷ್ಯ ಪ್ರಗತಿಯ ಒಂದು ರೂಪವನ್ನು ನಮಗೆ ದರ್ಶನ ಮಾಡಿಸಿದ್ದಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"Sisyphus is punished by the Gods to roll a boulder a hill only to see it roll back down again. He has to do this till eternity. This is the same fate of human progress. Cycles of progress and devastation continue forever." - Mankutimma [Translator’s note: http://en.wikipedia.org/wiki/Sisyphus ]

Themes

DevotionMoralityFate

Video Section

Video Coming Soon

Detailed video explanations by scholars and experts will be available soon.