Mankutimmana Kagga by D.V. Gundappa
ಕಾಕತಾಳೀಯ ಕಥೆ ಲೋಕಚರಿತೆಯೊಳೆಷ್ಟೊ! । ತೀಕೆಗೆಟುಕವು ನಮಗೆ ಕಾರ್ಯಕಾರಣಗಳ್ ॥ ಎಕೊ ಕಣ್ಣಲೆಯುವುದು; ಎನೊ ಅದ ಪಿಡುಯುವುದು । ವ್ಯಾಕುಲತೆ ಫಲಿತಾಂಶ - ಮಂಕುತಿಮ್ಮ ॥ ೩೦೫ ॥
kAkatALIya kathe lOkachariteya oLu eShTo! । TIkege eTukavu namage kAryakAraNagaL ॥ eko kaNNu aleyuvudu; eno ada piDiyuvudu । vyAkulate phalitAMsha - Mankutimma ॥ 305 ॥
ಈ ಜಗತ್ತಿನ ಚರಿತ್ರೆಯಲ್ಲಿ ನಡೆದ ಘಟನೆಗಳು ಕಾಕತಾಳೀಯವಾಗಿ ನಡೆದಿರುವುದೆಷ್ಟೋ? ಒಂದು ಕಾಗೆ ತಾಳೆ ಮರದ ಮೇಲೆ ಕುಳಿತ ತತ್ಕ್ಷಣ ಆ ಮರದಿಂದ ಒಂದು ಹಣ್ಣು ಬಿದ್ದರೆ!!!! ಆ ಘಟನೆಗಳಿಗೆ ಕಾರಣವನ್ನು ಹುಡುಕುವುದು ಕಷ್ಟ. ಅದಕ್ಕೇ ಕಾಕತಾಳೀಯ ಎನ್ನವುದು. ಅದು ಗೊತ್ತಿದ್ದರೂ ನಮ್ಮ ಕಣ್ಣುಗಳು ಕಂಡದ್ದನ್ನೆಲ್ಲ ಹಿಡಿಯಲು ಮತ್ತು ಪಡೆಯಲು ಆಸೆಪಡುವುದು. ಆದರೆ ಅದನ್ನು ಹಿಡಿಯಲು ಆಗದೆ, ಪಡೆಯಲು ಸೋತು, ಕೇವಲ ಮನೋ ವ್ಯಾಕುಲತೆ ಮಾತ್ರ ನಮಗೆ ಸಿಗುವ ಫಲ ಎಂದು ಮಾನವರ ಪ್ರಯತ್ನಗಳ ಕಥೆಯನ್ನು ಸೂಕ್ಷ್ಮವಾಗಿ ಅರುಹುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"There are so many coincidences in world (like the time of a crow sitting on a palm tree and the palm leaf falling). The causation of events is beyond our analysis. Our eyes wander without reason. It catches attention of some things without reason. The end result of trying to analyze is only anxiety." - Mankutimma
Video Coming Soon
Detailed video explanations by scholars and experts will be available soon.