Mankutimmana Kagga by D.V. Gundappa
ಅಪ್ಪಾಲೆ ತಿಪ್ಪಾಲೆ ತಿರುಗಿಬಿದ್ದವನೊಬ್ಬ । ಸ್ವಪ್ನಲೋಕದಿ ತಿರೆಯ ಮರೆತಾತನೊಬ್ಬ ॥ ತಪ್ಪುಸರಿಗಳ ತೂಕವಳೆಯೆ ಕುಳಿತವನೊಬ್ಬ । ಬೆಪ್ಪನಾರ್ ಮೂವರಲಿ ? - ಮಂಕುತಿಮ್ಮ ॥ ೩೦೩ ॥
appAle tippAle tirugibiddavanobba । svapnalOkadi tireya mareta Atanu obba ॥ tappu sarigaLa tUkava aLeye kuLitavanu obba । beppanAr mUvarali? - Mankutimma ॥ 303 ॥
ಆ ಚಿಕ್ಕ ಮಕ್ಕಳು ‘ ಅಪ್ಪಾಲೆತಿಪ್ಪಾಲೆ ‘ ಆಡುವಾಗ ತಲೆ ಸುತ್ತಿದಂತಾಗುತ್ತದೆ. ಹಾಗೆ ಈ ಬದುಕಿನಲ್ಲಿ ತಿರುಗಿ ತಿರುಗಿ ತಲೆ ಸುತ್ತಿ ಭ್ರಮೆ ಹಿಡಿದು ಕುಳಿತಂತವನು ಒಬ್ಬ, ತಾನು ತಿರಿದು ತಂದ ಭಿಕ್ಷೆಯನ್ನುಕನಸು ಕಾಣುತ್ತಾ ಕಾಲಲ್ಲಿ ಒದ್ದು, ಇದ್ದದ್ದನ್ನೂ ಕಳೆದುಕೊಂಡ ‘ ತಿರುಕನೋರ್ವನೂರಮುಂದೆ ‘ ಎನ್ನುವ ಪದ್ಯದಲ್ಲಿ ಬರುವ ತಿರುಕನೊಬ್ಬ, ಮತ್ತು ಸದಾ ಕಾಲ ಅನ್ಯರ ತಪ್ಪುಸರಿಗಳ ಎಣಿಕೆಹಾಕುತ್ತಾ ಕೂರುವವನೊಬ್ಬ. ಈ ಮೂವರಲ್ಲಿ ಬೆಪ್ಪನಾರು ಎಂದು ಕೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"One plays merry-go-round and has fallen flat with dizziness. Another one is day dreaming and has forgotten the real world. There is another one who is endlessly weighing the right and the wrong for every action. All of them are not doing any action. Who among the three is the most dumb?" - Mankutimma
Video Coming Soon
Detailed video explanations by scholars and experts will be available soon.