Mankutimmana Kagga by D.V. Gundappa
ಹೊತ್ತು ಕಣಕಣದಿ ಮಣ್ಣನು ಗೆದ್ದಲಿರುವೆಗಳು । ಮೆತ್ತುತೆಡೆಬಿಡದೆ ದುಡಿದಾಗಿಸಿದ ಗೂಡು ॥ ಹುತ್ತವಾಗುವುದು ವಿಷಸರ್ಪಕ್ಕೆ; ಮಾನವನ । ಯತ್ನಗಳ ಕಥೆಯಿಷ್ಟೆ - ಮಂಕುತಿಮ್ಮ ॥ ೩೦೨ ॥
hottu kaNakaNadi maNNanu geddalairuvegaLu । mettuta eDebiDade duDidu Agisida gUDu ॥ huttavAguvudu viShasarpakke; mAnavana । yatnagaLa katheyiShTe - Mankutimma ॥ 302 ॥
ಇರುವೆಗಳು ಮಣ್ಣ ಕಣ ಕಣವನ್ನು ನಿರಂತರವಾಗಿ ಹೊತ್ತು ತಂದು ಬಹಳ ಶ್ರಮ ಪಟ್ಟು ಗೂಡನ್ನು ಕಟ್ಟುತ್ತವೆ. ಆದರೆ ಅದರೊಳಕ್ಕೆ ಒಂದು ಹಾವು ಬಂದು ವಾಸಿಸುತ್ತದೆ. ಇರುವೆಗಳ ಶ್ರಮ ಅವುಗಳಮಟ್ಟಿಗೆ ಸಂಪೂರ್ಣ ವ್ಯರ್ಥವಾಗುತ್ತದೆ. ಹಾಗೆಯೇ ಮನುಷ್ಯರು ನಿರಂತರ ಶ್ರಮಪಟ್ಟು ಕೆಲಸಮಾಡಿ ಆ ಕೆಲಸದ ಫಲವನ್ನು ಪರರು ಕಸಿದುಕೊಂಡು ಬಿಡುತ್ತಾರೆ ಎಂದು ಒಂದು ಜಗತ್ಸತ್ಯವನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"Ants build an ant-hill by carrying each grain of sand laboriously and working incessantly. Later it becomes home for a poisonous snake. Man’s effort also suffer the same fate." - Mankutimma
Video Coming Soon
Detailed video explanations by scholars and experts will be available soon.