Back to List

Kagga 30 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಬ್ರಹ್ಮವೇ ಸತ್ಯ, ಸೃಷ್ಟಿಯೆ ಮಿಥ್ಯೆಯೆನ್ನುವೊಡೆ । ಸಂಬಂಧವಿಲ್ಲವೇನಾ ವಿಷಯಯುಗಕೆ? ॥ ನಮ್ಮ ಕಣ್ಮನಸುಗಳೆ ನಮಗೆ ಸಟೆ ಪೇಳುವೊಡೆ । ನೆಮ್ಮುವುದದಾರನೋ? - ಮಂಕುತಿಮ್ಮ ॥ ೩೦ ॥

brahmavE satya sRuShTiye mithye ennuvoDe । saMbandhavillavEnA viShayayugake? ॥ namma kaNNmanasugaLe namage saTe pELuvoDe । nemmuvudadu AranO? - Mankutimma ॥ 30 ॥

Meaning in Kannada

ಬ್ರಹ್ಮವೇ ಸತ್ಯ ಸೃಷ್ಟಿಯೇ ಮಿಥ್ಯ ಎನ್ನುವುದಾದರೆ ಈ ಜಗತ್ತು ಮತ್ತು ಅದನ್ನು ಸೃಷ್ಟಿಮಾಡಿದ ಆ ಪರ ಬ್ರಹ್ಮನಿಗೂ ಯಾವುದೇ ಸಂಬಂಧವಿಲ್ಲವೇನು? ನಮ್ಮ ಕಣ್ಣು ಮನಸ್ಸುಗಳೇ ನಮಗೆ ಅಸತ್ಯವನ್ನು ಹೇಳುವುದಾದರೆ ನಂಬುವುದು ಯಾರನ್ನು ಎಂದು, ಸೃಷ್ಟಿಕರ್ತ ಮತ್ತು ಸೃಷ್ಟಿಯ ನಡುವಿನ ಸಂಬಂಧ ಕುರಿತಾದಂತ ಒಂದು ಅದ್ಭುತ ವಿಷಯವನ್ನು ನಮ್ಮ ಮುಂದಿಡುತ್ತಾರೆ ಶ್ರೀ ಡಿ.ವಿ.ಜಿ.ಯವರು ಈ ಕಗ್ಗದ ರೂಪದಲ್ಲಿ.

Meaning & Interpretation

If God alone is real and all creation is a mere illusion, then is there no relation between those two? If our own eyes and mind tell us lies, then whom shall we believe? - Mankutimma

Themes

DevotionNature

Video Section

Video Coming Soon

Detailed video explanations by scholars and experts will be available soon.