Mankutimmana Kagga by D.V. Gundappa
ಎರಡುಮಿರಬಹುದು ದಿಟ; ಶಿವರುದ್ರನಲೆ ಬೊಮ್ಮ! । ಕರವೊಂದರಲಿ ವೇಣು, ಶಂಖವೊಂದರಲಿ! ॥ ಬೆರಳ್ಗಳೆರಡಾನುಮಿರೆ ಕೈ ಚಿಟಿಕೆಯಾಡುವುದು । ಒರುವನಾಡುವುದೆಂತು? - ಮಂಕುತಿಮ್ಮ ॥ ೨೯ ॥
eraDum irabahudu diTa; shivarudranale bomma! । karavondarali vENu, shankavodarali ॥ beraLgaLu eraDAnumire kai chiTikeyADuvudu । oruvanAduvudentu? - Mankutimma ॥ 29 ॥
ಪರಮಾತ್ಮನಿಗೆ, ಶಿವನೆಂಬ ಶಾಂತ ಸುಂದರ ಮತ್ತು ಶುಭಕರವಾದ ರೂಪವೂ ಇರಬಹುದು ಅಥವಾ ರುದ್ರನೆಂದು ಕರೆಯಲ್ಪಡುವ ಭಯಂಕರ ರೂಪವೂ ಇರಬಹುದು ಅಥವಾ ಸರ್ವರನೂ ತನ್ನೆಡೆಗೆ ಆಕರ್ಷಿಸುವ, ನಯನ ಮನೋಹರ, ವೇಣುಗಾನಲೋಲನ ರೂಪವೂ ಇರಬಹುದು ಅಥವಾ ರಣ ಕಹಳೆಗೆ ದನಿಗೂಡಿಸಿ ಯುದ್ಧಕ್ಕೆ ಆಹ್ವಾನವೀಯುವ ಪಾಂಚಜನ್ಯವನ್ನೂದುವ ಕ್ಷಾತ್ರ ರೂಪವೂ ಇರಬಹುದು. ಎರಡು ರೂಪಗಳೂ ಸತ್ಯವಿರಬಹುದು. ಏಕೆಂದರೆ ಕೈ ಚಿಟಿಕೆಯಾಡಿಸಲು, ಎರಡು ಬೆರಳುಗಳೂ ಬೇಕು. ಒಂದೇ ಬೆರಳಲ್ಲಿ ಚಿಟಿಕೆಯಾಗುವುದೇ ಎನ್ನುತ್ತಾರೆ ಶ್ರೀ ಡಿ.ವಿ.ಜಿ ಯವರು ಈ ಕಗ್ಗದಲ್ಲಿ
It could be possible that both are true. The seed of creation could well be in the destruction it self. Brahma (God of creation) may be with in Shiva (God of destruction). The Lord (Vishnu) has a flute in one hand and divine conch in the other. Only if he have two fingers can he produce a tapping sound. What can he do alone? Hence there must be opposites the creations. - Mankutimma
Video Coming Soon
Detailed video explanations by scholars and experts will be available soon.