Back to List

Kagga 28 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಕಾರುಣ್ಯ ಸರಸ ಸೌಂದರ್ಯ ರುಚಿಗಳೆ ಸೃಷ್ಟಿ- । ಕಾರಣಮೆನಿಪ್ಪವೊಲು ತೋರ್ಪುದೊಂದು ಚಣ ॥ ಕಾರ್ಪಣ್ಯ ಕಟುಕತೆಗಳೆನಿಪುದಿನ್ನೊಂದು ಚಣ । ತೋರದಾವುದು ದಿಟವೊ - ಮಂಕುತಿಮ್ಮ ॥ ೨೮ ॥

kAruNya sarasa soundarya ruchigaLe sRuShTi । kAraNamenippavolu tOrpudondu chaNa ॥ kArpaNya kaTukategaLenipudu innodu chaNa । tOradAvudu diTavo - Mankutimma ॥ 28 ॥

Meaning in Kannada

ಸಮಗ್ರ ಜೀವನದ ಚಿತ್ರದಲ್ಲಿ,ಈ ಜಗದ್ವ್ಯಾಪಾರಕ್ಕೆ, ಒಂದು ಬಾರಿ ಎನಗೆ, ಮಾನವರ ನಡುವಿನ ಕರುಣೆ, ವಿನೋದ ಸೌಂದರ್ಯ ಮುಂತಾದ ಸುಭಾವಗಳೇ ಕಾರಣವೆನಿಸುತ್ತದೆ. ಮತ್ತೆ ಕೆಲವು ಬಾರಿ ಜೀವನದ ಕಷ್ಟ ದುಃಖಗಳು, ಬಡತನ ಮತ್ತು ಬಡತನದಿಂದ ಕೂಡಿದ ಬದುಕಿನ ಕ್ಲಿಷ್ಟತೆಯಿಂದ ಕೂಡಿದ ಕಷ್ಟಗಳೇ ಕಾರಣವೆಂದು ಅನಿಸುತ್ತದೆ, ಇದು ಸತ್ಯವೋ ಅಥವಾ ಅದು ಸತ್ಯವೋ ಎಂದು ಅರಿಯದಾಗಿದೆ ಎಂದು ಒಂದು ಡೋಲಾಯಮಾನವಾದ ಭಾವನೆ ವ್ಯಕ್ತಪಡಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

There are two seeming truths about creation. One suggests that compassion, romance, beauty and taste is the reason why there is a creation after all. Another second it seems as if the struggle and the hard heartedness is what that drives the world. It is not possible to know which one is the absolute truth. - Mankutimma

Themes

WisdomLifeSufferingNatureLoveWar

Video Section

Video Coming Soon

Detailed video explanations by scholars and experts will be available soon.