Mankutimmana Kagga by D.V. Gundappa
ಧರೆಯ ಬದುಕೇನದರ ಗುರಿಯೇನು ಫಲವೇನು? । ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ ॥ ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ । ನರನು ಸಾಧಿಪುದೇನು? - ಮಂಕುತಿಮ್ಮ ॥ ೨೭ ॥
dhareya baduku enadara guriyEnu phalavEnu? । bari baLasu baDidATa bari paribhramaNe ॥ tirutirugi hoTTe horakoLuva mRuga khagakinta । naranu sAdhipudu Enu? - Mankutimma ॥ 27 ॥
ಈ ಭೂಮಿಯಲ್ಲಿ ಜನಿಸಿದ ನಾವು ಮತ್ತು ನಮ್ಮ ಬದುಕು ಇದರ ಗುರಿಯೇನು? ಇದಕ್ಕಿರುವ ಪ್ರಯೋಜನವೇನು? ಸುಮ್ಮನೆ ಸುತ್ತಾಟ ಕೇವಲ ಪ್ರದಕ್ಷಿಣೆ ಬಂದ ಹಾಗೆ. ಕೇವಲ ಹೊಟ್ಟೆ ಪಾಡಿನ ಜೀವನ. ಪ್ರಾಣಿ ಪಕ್ಷಿಗಳಲ್ಲೂ ಸಹ ಈ ರೀತಿಯ ಹೊಟ್ಟೆ ಪಾಡಿನ ಜೀವನ ಮಾಡುತ್ತವೆ. ನಾವು ಅದಕ್ಕಿ೦ತ ಉತ್ತಮರೇನು ಅಲ್ಲ. ಇದೆಲ್ಲದರಿಂದ ಮನುಷ್ಯರು ಸಾಧಿಸುವುದದೇನು ? ಎಂದು ಈ ಕಗ್ಗದಲ್ಲಿ ಕೆಲವು ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತಾರೆ.
What is the meaning of life on this world? What is the aim? What are its fruits (benefit of enduring it)? Any action we do is just a round about to the ultimate goal. It is a constant struggle. We seem to come back to the proverbial square one again and again. Don't the animals and birds that lead a nomadic life wandering about for food very similar to us? Then what is the special achievement of mankind? - Mankutimma
Video Coming Soon
Detailed video explanations by scholars and experts will be available soon.