Mankutimmana Kagga by D.V. Gundappa
ಹಟವಾದಕೆಡೆಯೆಲ್ಲಿ ಮನುಜಪ್ರಪಂಚದಲಿ? । ಸಟೆಯೆಷ್ಟೊ ದಿಟವೆಷ್ಟೊ ಬೆರೆತಿರುವುವಿಲ್ಲಿ ॥ ಪಟುವಾಗಿ ನಿಲಲಹುದೆ ಮಣಲೊಳೆಸಗಿದ ಗೋಡೆ? । ಕಟುತೆ ಸಲ್ಲದು ಜಗಕೆ- ಮಂಕುತಿಮ್ಮ ॥ ೨೯೯ ॥
haTavAdake eDeyelli manuja prapanchadali? । saTeyeShTo diTaveShTo beretiruvivilli ॥ paTuvAgi nilalahude maNaloLesagida gODe? । kaTute salladu jagake - Mankutimma ॥ 299 ॥
ಖಂಡಿತವಾದಕ್ಕೆ ಅಥವಾ ಹಟವಾದಕ್ಕೆ ಈ ಜಗತ್ತಿನಲ್ಲಿ ಸ್ಥಾನವಿಲ್ಲ.ಏಕೆಂದರೆ ಈ ಜಗತ್ತಿನಲ್ಲಿ ನಿಜ ಮತ್ತು ಸುಳ್ಳು ಸಮಾನ ಪ್ರಮಾಣದಲ್ಲಿ ಬೆರೆತಿದೆ. ಹೀಗೆ ಸುಳ್ಳು ಸತ್ಯಗಳ ಸಂಮಿಶ್ರಣದಿಂದ ಆದ ಈ ಜಗತ್ತು ಹೇಗಿದೆಯೆಂದರೆ ಮರಳಲ್ಲಿ ಕಟ್ಟಿದ ಗೋಡೆಯಂತಿದೆ.ಹಾಗಾಗಿ ಜಗತ್ತಿನಲ್ಲಿ " ಇದು ಹೀಗೇ ಇರಬೇಕು ಎಂದಾಗಲೀ ಅಥವಾ ಇದು ಹೀಗೇ ಆಗಬೇಕು’ ಎಂಬ ಕಟುತ್ವ ಇರಬಾರದು ಎಂದು ಪ್ರಸ್ತಾಪಮಾಡುತ್ತಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"One must not take a hard-liner's approach in life. Is it possible? There are as many lies in our lives mixed up as our turths. Can a wall built of mud (us) stay put under pressure? We should not be so hard on rest of the world when we ourselves are imperfect." - Mankutimma
Video Coming Soon
Detailed video explanations by scholars and experts will be available soon.