Mankutimmana Kagga by D.V. Gundappa
ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ । ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ ॥ ಗುಡಿಯೊಳಗೆ ಕೊಡುವ ಹೂ ದೈವಭಕ್ತಗೆ ಚೆಂದ । ಬಿಡಿಗಾಸು ಹೂವಳಗೆ- ಮಂಕುತಿಮ್ಮ ॥ ೩೦೦ ॥
giDadi nagutiruva hU prakRutisakhanige chenda । maDadi muDidiruva hU yuvakange chenda ॥ guDiyoLage koDuva hU daivabhaktage chenda । biDi kAsu hUvaLage - Mankutimma ॥ 300 ॥
ಗಿಡದಲ್ಲಿ ಅರಳಿದ ಹೂ ಕಂಡು ನಿಸರ್ಗ ಪ್ರೇಮಿ ಸಂತಸಪಡುತ್ತಾನೆ. ಅದೇ ಹೂವನ್ನು ತನ್ನ ಮಡದಿಯ ತುರುಬಿನಲ್ಲಿ ಕಂಡು ಆನಂದಿಸುತ್ತಾನೆ ರಸಿಕ ಯುವಕ. ಆ ಹೂವನ್ನು ದೇವಾಲಯದಲ್ಲಿ ದೇವರ ಪಾದಕ್ಕೆ ಭಕ್ತಿಯಿಂದ ಸಮರ್ಪಿಸಿ ಶ್ರದ್ಧೆಯಿಂದ ಪ್ರಸಾದದ ರೂಪದಲ್ಲಿ ಸ್ವೀಕರಿಸುತ್ತಾನೆ ಭಕ್ತ. ಆದರೆ ಯಾರು ಹೇಗೆ ಉಪಯೋಗಿಸಿಕೊಂಡರೂ ಆ ಹೂವನ್ನು ಮಾರುವವನಿಗೆ ಅದು ಮಾರಾಟವಾಗಿ ಅವನಿಗೆ ಕಾಸು ಬಂದರೆ ತೃಪ್ತಿ ಎಂದು ಸಾಮಾನ್ಯ ಬದುಕಿನ ಒಂದು ಸತ್ಯವನ್ನು ವಿಮರ್ಶಿಸಿದ್ದಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"The same object hsa different importance for others. A smiling flower in a plant will make a naturalist happy. A tasteful youth will be happy if his wife wears that flower. A devotee will be happy if that flower is placed on the idol at the temple. For a flower maid, it is just a means to make money."- Mankutimma
Video Coming Soon
Detailed video explanations by scholars and experts will be available soon.