Mankutimmana Kagga by D.V. Gundappa
ಪೆರ್ಮೆಯ ಗುಣಂಗಳಿನ್ನೂರು ಶಾಸ್ತ್ರೋಕ್ತದವು । ಸರ್ವೋತ್ತಮಗಳೆರಡು ಸರ್ವಕಠಿನಗಳು ॥ ನಿರ್ಮತ್ಸರತೆಯೊಂದು ದೋಷಿಯೊಳ್ ಕ್ಷಮೆಯೊಂದು । ಬ್ರಾಹ್ಮಿಕಾಭ್ಯಾಸವದು - ಮಂಕುತಿಮ್ಮ ॥ ೨೯೭ ॥
permeya guNangaLinnUru shAstrOktadavu । sarvOttamagaLeraDu sarvakaThinagaLu ॥ nirmatsarateyu ondu dOShiyoL kShameyondu । brAhmikAbhyAsavadu - Mankutimma ॥ 297 ॥
ನಮ್ಮಲ್ಲಿ ಶಾಸ್ತ್ರದಲ್ಲಿ ಮತ್ತು ಹಿರಿಯರಿಂದ ‘ಉತ್ತಮಗುಣಗಳು’ ಎಂದು ಹೇಳಪಟ್ಟಿರುವುದು ಹಲವಾರು ಮತ್ತು ಅದರ ಪಟ್ಟಿ ಬಹಳ ದೊಡ್ಡದು. ಆದರೆ ಅತ್ಯುತ್ತಮವಾದ ಆದರೆ ಪಾಲಿಸಲು ಬಹಳ ಕಠಿಣವಾದ ಅತ್ಯುತ್ತಮ ಗುಣಗಳು ಎರಡು ಮಾತ್ರ. ಒಂದು ಅನ್ಯರ ದೋಷವನ್ನು ಕ್ಷಮಿಸುವುದು ಮತ್ತು ಪರರಲ್ಲಿ ಮತ್ಸರವಿಲ್ಲದಿರುವುದು. ಇವುಗಳನ್ನು ಅಭ್ಯಾಸಮಾಡುವುದು ಬಹಳ ಉತ್ತಮವಾದುದು ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"There are a lot of good qualities described in the scriptures. Two of them are the best and most difficult to cultivate. One is to be free from jealousy. The other is to forgive a sinner. These are the very best practices that one must follow." - Mankutimma
Video Coming Soon
Detailed video explanations by scholars and experts will be available soon.