Back to List

Kagga 296 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಮರುಕದುಂಬಿದ ಕಣ್ಣನೋಟದೊಳಗಿದ್ದೀತು । ಬಿರುನುಡಿಯೊಳಿರದೊಂದು ಕೂರಲಗು, ಸಖನೆ ॥ ಕರವಾಳಕದಿರದಿಹ ದುರಿತಕಾರಿಯ ಹೃದಯ । ಕರುಣೆಯಿಂ ಕರಗೀತೊ- ಮಂಕುತಿಮ್ಮ ॥ ೨೯೬ ॥

maruka tuMbida kaNNA nOTadoLage iddItu । birunuDiyoLa iradondu kUralagu, sakhane ॥ karavALake adiradiha duritakAriya hRudaya । karuNeyiM karagIto - Mankutimma ॥ 296 ॥

Meaning in Kannada

ಯಾರಾದರೂ ದುಷ್ಟನನ್ನು ತಿದ್ದಲು ನಾವು ಕೋಪಗೊಂಡು ಎರಡು ಮಾತನಾಡಬಹುದು. ಆದರೆ ನಿರೀಕ್ಷಿದ ಪರಿಣಾಮ ಬಾರದೆ, ದುಷ್ಟ ತಿರುಗಿ ಬೀಳುವ ಅಥವಾ ಅಸಡ್ಡೆಯ ಪ್ರತಿಕ್ರಿಯೆ ತೋರಬಹುದು. ಕತ್ತಿಯಂತೆ ತೀಕ್ಷ್ಣವಾದ ಮಾತುಗಳಿಂದ ಅಥವಾ ಬಿರುನುಡಿಗಳಿಂದ ಬದಲಾಗದ ದುಷ್ಟ, ಮರುಕ ತೋರಿ ಕರುಣೆಯಿಂದ ಮಾತನಾಡಿ, ಪ್ರೀತಿಯಿಂದ ಅವನನ್ನು ತಿದ್ದಲು ಪ್ರಯತ್ನಮಾಡಿದಾಗ, ಅವನ ಮನ ಕರಗಿ ಬದಲಾಗಬಹುದು,ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ತಿಳಿಹೇಳಲು ಪ್ರಯತ್ನಪಡುತ್ತಾರೆ.

Meaning & Interpretation

"Friend, there is a powerful weapon in a compassion filled eyes that is not found in the harsh words. A sinner may not be get reformed by the fear of a sword, but his heart could melt down by compassion." - Mankutimma

Themes

DeathMoralitySocietyLove

Video Section

Video Coming Soon

Detailed video explanations by scholars and experts will be available soon.