Back to List

Kagga 295 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ತಪ್ಪನಿನಿತುಂ ಸೈಸದಪ್ಪಟದ ಗುಣಶಾಲಿ । ಕಪ್ಪು ಕಂಡು ಕನಲ್ವ ಕೆಂಡ ಗುಲಗಂಜಿ ॥ ಉಪ್ಪೊ ಸಪ್ಪೆಯೊ ನಿನ್ನ ಮೈಬೆವರು ನೆಕ್ಕಿ ತಿಳಿ । ಒಪ್ಪಿಹೆಯ ನೀನಜನ?- ಮಂಕುತಿಮ್ಮ ॥ ೨೯೫ ॥

tappan initum saisada appaTada guNashAli । kappu kanDu kanalva kenDa gulaganji ॥ uppo sappeyo ninna maibevaru nekki tiLi । oppiheya nIn ajana? - Mankutimma ॥ 295 ॥

Meaning in Kannada

ತಾನು ಮಹಾ ಗುಣಶಾಲಿ, ತಾನು ತಪ್ಪೇ ಮಾಡಿಲ್ಲ, ತಾನು ಹಿಂದೆ ಎಂದೂ ತಪ್ಪೇ ಮಾಡಿಲ್ಲ ಮತ್ತು ಮುಂದೆಯೂ ಮಾಡುವುದಿಲ್ಲ ಎಂದು ಡಂಬ ಕೊಚ್ಚಿಕೊಳ್ಳುವವರನ್ನು ಮತ್ತು ಅಂತಹ ಮನೋಭಾವದಿಂದ ಅನ್ಯರಲ್ಲಿ ‘ಗುಣ’ವನ್ನೇ ನೋಡದವರನ್ನು ನಾವು ಕಂಡಿದ್ದೇವಲ್ಲವೇ? ತನ್ನ ಮೈಮೇಲೆ ಕಪ್ಪು ಚುಕ್ಕೆ ಇದ್ದಾಗ್ಯೂ ಕಪ್ಪನ್ನು ಕಂಡು ಕೋಪಗೊಳ್ಳುವ ಕೆಂಪನೆಯ ಗುಲಗಂಜಿಯಂತೆ ಇವರು. ನಮ್ಮ ಬೆವರು ಉಪ್ಪೋ ಸಪ್ಪೆಯೋ ಎಂದು ನಮ್ಮ ಬೆನ್ನನ್ನು ನಾವೇ ನೆಕ್ಕಿ ನೋಡಿದರೆ ತಿಳಿಯುತ್ತದೆ. ಸೃಷ್ಟಿಕರ್ತನನ್ನು ನೀನು ನಂಬುವೆಯಾ? ಎಂದು ಒಂದು ವಿಡಂಬನೆಯನ್ನು ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ

Meaning & Interpretation

"If a person does not tolerate mistakes from any one and considers himself perfect then he is like a crab's eye seed which think it is red and oblivious to its back which is black. If you want to know if your sweat is sweet or salty, then you have lick and taaste. You will know that it is salty, just like anyone else. At least now, do you agree that there is a Creator?" - Mankutimma

Themes

Self

Video Section

Video Coming Soon

Detailed video explanations by scholars and experts will be available soon.