Back to List

Kagga 291 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಬೀಸಿದಲ್ಲದೆ ಬೂದಿಕವಿದ ಕಿಡಿಯುರಿದೀತೆ? । ಕೈಸೋಕದಿರೆ ಕೈಯ ಸಪ್ಪುಳಾದೀತೆ? ॥ ವಾಸನೆಯೆ ಮಾತೆಯಾಶೆಗೆ ಪಿತನು ಸಂದರ್ಭ । ದೋಷವೊಳಗೋ ಹೊರಗೊ? - ಮಂಕುತಿಮ್ಮ ॥ ೨೯೧ ॥

bIsidallade bUdikavida kiDiyuridIte? । kaisOkadire kaiya sappuLAdIte? ॥ vAsaneye mAteyAshege pitanu sandarbha । dOShavoLagO horago? - Mankutimma ॥ 291 ॥

Meaning in Kannada

ಬೂದಿ ಮುಚ್ಚಿದ ಕೆಂಡಕ್ಕೆ ಗಾಳಿಬೀಸಿದರೆ ಮತ್ತೆ ಉರಿಯುತ್ತದೆ. ಹಾಗೆಯೇ ಎರಡೂ ಕೈಗಳು ಸೋಕಿದರೆ ಸಪ್ಪಳವಾಗುತ್ತದೆ. ಇದರಂತೆಯೇ ನಮ್ಮ ಪ್ರತೀ ಕ್ರಿಯೆಗೂ ನಾವು ಹೊತ್ತು ತಂದ ವಾಸನೆಯೇ ತಾಯಿ ಮತ್ತು ನಾವು ಇರುವ ಸಂದರ್ಭವೇ ತಂದೆ. ಇದರಲ್ಲಿ ದೋಷವು ಹೊತ್ತು ತಂದದ್ದರಲ್ಲೋ ಅಥವಾ ಇಲ್ಲಿ ಗಳಿಸಿಕೊಂಡದ್ದರಲ್ಲೋ ಎಂದು ಒಂದು ಗಹನವಾದ ಪ್ರಶ್ನೆಯನ್ನು ನಮ್ಮ ಮುಂದಿಡುತ್ತಾರೆ ಮಾನ್ಯ ಗುಂಡಪ್ಪನವರು.

Meaning & Interpretation

"If you don't blow over the soot covered coal, will it catch fire? If both hands don't meet, can one clap? Desire is the mother addictions (sin); But the father is circumstances. Hence, we can never tell if the root of sin is innate or circumstantial." - Mankutimma [Translator's note: a classical nature v/s nurture argument.]

Themes

MoralityNature

Video Section

Video Coming Soon

Detailed video explanations by scholars and experts will be available soon.