Back to List

Kagga 290 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸಕ್ಕರೆಯ ಭಕ್ಷ್ಯವನು ಮಕ್ಕಳೆದುರಿಗೆ ಕೈಗೆ । ಸಿಕ್ಕುವಂತಿರಿಸಿ ಕದ್ದರೆ ಗದ್ದರಿಪುದೇಂ? ॥ ತಕ್ಕುದಲ್ಲದಪೇಕ್ಷೆಗೇಕೆ ಮದ್ಯವ ಕುಡಿಸು-। ತುಕ್ಕಿಸುವನದನು ವಿಧಿ? - ಮಂಕುತಿಮ್ಮ ॥ ೨೯೦ ॥

sakkareya bhakShyavanu makkaLedurige kaige । sikkuvantirisi kaddare gaddaripudEM? ॥ takkudalladapEkShegEke madyava kuDisu- । tukkisuvanadanu vidhi? - Mankutimma ॥ 290 ॥

Meaning in Kannada

ಸಿಹಿಯಾದ ಮಿಠಾಯಿಯನ್ನು ಮಕ್ಕಳ ಎದುರಿಗೆ ಇರಿಸಿ, ಅವರು ಅದನ್ನು ಕದ್ದು ತಿಂದರೆ ಗದರಿಸುವಂತೆ ಯೋಗ್ಯವಲ್ಲದ ಆಸೆಗಳಿಗೆ ನಮ್ಮ ಮನಸ್ಸುಗಳಲ್ಲಿ ಇಂಬುಕೊಡುವಂತೆ ಈ ಜಗತ್ತಿನಲ್ಲಿ ಎಲ್ಲ ವಿಷಯಗಳನ್ನು ಇಟ್ಟು, ಅವುಗಳನ್ನು ಪಡೆಯಲು ನಮ್ಮ ಮನಸ್ಸನ್ನು ಹೆಂಡಕುಡಿದವನಂತೆ ಆಡಿಸುತ್ತಿದೆ ‘ವಿಧಿ’ ಎಂದು ಜೀವನದ ವಾಸ್ತವವನ್ನು ಪ್ರಸ್ತುತ ಪಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"If you keep a sweet candy in front of a child and ask it not to eat, it will not work out. The child will definitely not be able to resist and try eating it. Then will you punish the child? Man already has desires which are not moral. But, fate adds intoxication to the desiring mind and encourages it." - Mankutimma

Themes

MoralityFateDuty

Video Section

Video Coming Soon

Detailed video explanations by scholars and experts will be available soon.